ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗದ ಹಂಗರಹಳ್ಳಿಯ ವಿದ್ಯಾ ಚೌಡೇಶ್ವರಿ ಮಠದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ಸಮೇತ ನವರಾತ್ರಿ ಪೂಜೆ ಸಲ್ಲಿಸಿದರು.
ಶ್ರೀಮಠದ ಶ್ರೀ ಬಾಲಮಂಜುನಾಥ ಸ್ವಾಮೀಜಿಗಳು ನೇತೃತ್ವದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ನವರಾತ್ರಿಯ ಮೊದಲ ದಿನವಾದ ಇಂದು ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಹೋಮಹವನಗಳನ್ನು ನಡೆಸಲಾಯಿತು.
ಡಿ.ಕೆ. ಶಿವಕುಮಾರ್ ಪತ್ನಿ ಪತ್ನಿ ಉಷಾ ಶಿವಕುಮಾರ್ ಸಮೇತರಾಗಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಅವರಿಗೆ ಕುಣಿಗಲ್ ಶಾಸಕ ಡಾ. ರಂಗನಾಥ್, ಅವರ ಪತ್ನಿ ಡಾ. ಸುಮಾ ರಂಗನಾಥ್ ಕೂಡಾ ಸಾಥ್ ನೀಡಿದ್ದಾರೆ.

