ದುಬೈ: ಎಬಿ ಡೆವಿಲಿಯರ್ಸ್ ಅಬ್ಬರದ ಆಟದಿಂದಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ಅಮೋಘ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್, 20 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಕಲೆ ಹಾಕಿತ್ತು.
ಗುರಿ ಬೆನ್ನು ಹತ್ತಿದ್ದ ಆರ್ಸಿಬಿ ಎಬಿಡಿ ಕೇವಲ 22 ಬಾಲ್ಗಳನ್ನ ಎದುರಿಸಿ 6 ಸಿಕ್ಸ್ ಹಾಗೂ ಬೌಂಡರಿ ಬಾರಿಸಿ 55 ರನ್ಗಳಿಂದಾಗಿ 19.4 ಓವರ್ನಲ್ಲಿ ಇನ್ನು ಎರಡು ಬಾಲ್ ಉಳಿದಿರುವಂತೆಯೇ ಗೆಲುವಿನ ನಗೆ ಬೀರಿತು.
ಉಳಿದಂತೆ ಆರ್ಸಿಬಿ ಪರ ದೇವದತ್ತ ಪಡಿಕಲ್ 35, ಫಿಂಚ್ 14, ವಿರಾಟ್ ಕೊಹ್ಲಿ 43, ಗುರ್ ಕೀರತ್ ಸಿಂಗ್ 19 ರನ್ ಗಳಿಸಿದರು.

