ದೊಡ್ಡಬಳ್ಳಾಪುರ: ತಾಲ್ಲೂಕು ವಕೀಲರ ಸಂಘಕ್ಕೆ ನಗರದ ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದ ಭವನದಲ್ಲಿ ನಡೆದ ಮತದಾನದ ಫಲಿತಾಂಶ ಪ್ರಕಟವಾಗಿದೆ.
ಒಟ್ಟು 236 ಜನ ಸದಸ್ಯರಿರುವ ಸಂಘದಲ್ಲಿ 15 ಸ್ಥಾನಗಳಿಗೆ ಎರಡೂ ಬಣಗಳಿಂದ 30 ಜನ ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.15 ಸ್ಥಾನಗಳ ಪೈಕಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿ ಹಾಗೂ 10 ಜನ ನಿರ್ದೇಶಕರ ಆಯ್ಕೆ ನಡೆದಿದ್ದು. ಇದರಲ್ಲಿ 2 ಸ್ಥಾನ ಮಹಿಳಾ ಅಭ್ಯರ್ಥಿಗಳಿಗೆ, ಒಂದು ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು.
ಫಲಿತಾಂಶದ ವಿವರ
ಅಧ್ಯಕ್ಷ – ಬಿ.ಎಂ.ಬೈರೇಗೌಡ, ಉಪಾಧ್ಯಕ್ಷ – ಎಚ್.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ – ಎ.ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ – ಬಿ.ಎಸ್.ರೇಖಾ, ಖಜಾಂಚಿ – ಎ.ವಿ.ಮುರಳೀಧರ ಹಾಗೂ ನಿರ್ದೇಶಕರಾಗಿ ಎಂ.ಮುನಿರಾಜು, ಶಾಂತಲಾ, ವಸುಧಾ ಬಿ.ಎನ್, ಹರೀಶ್.ಹೆಚ್.ಜಿ, ಪ್ರಕಾಶ್. ಆರ್.ಡಿ, ರವಿ.ಆರ್, ಪ್ರಭಾಕರ್.ಆರ್, ನರಸಿಂಹಮೂರ್ತಿ. ಎನ್, ಶ್ರೀನಿವಾಸ್, ಸುರೇಶ್.ಎನ್.ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಲ್.ಸಂಜೀವಪ್ಪ ಘೋಷಿಸಿದ್ದಾರೆ.

