ದೊಡ್ಡಬಳ್ಳಾಪುರ: ದಸರಾ ಬೊಂಬೆಗಳ ಸಂಭ್ರಮಕ್ಕು ಕಂಟಕವಾದ ಕರೊನಾ

ದೊಡ್ಡಬಳ್ಳಾಪುರ :ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ ದೊಡ್ಡಬಳ್ಳಾಪುರದ ಹಲವಾರು ಮನೆಗಳಲ್ಲಿಯೂ ದಸರಾ ದರ್ಬಾರ್ ಅಂದರೆ  ದಸರಾ ಬೊಂಬೆಗಳನ್ನು ಕೂರಿಸುವ ಆಚರಣೆ ಆರಂಭಗೊಂಡಿದೆ. ಆದರೆ ಈ ಬಾರಿ ಕರೊನಾ ಬೊಂಬೆಗಳ ಸಂಭ್ರಮಕ್ಕೆ ತಣ್ಣೀರೆರೆಚಿದ್ದು, ಎಲ್ಲೆಡೆ ಸರಳ ಆಚರಣೆ ಕಂಡು ಬರುತ್ತಿದೆ.

ಹಿಂದಿನ ವರ್ಷಗಳಲ್ಲಿ ಪ್ರತಿದಿನ ಸಂಜೆಯಾಗುತ್ತಿದ್ದಂತೆಯೇ ಬೊಂಬೆ ಕೂರಿಸುವವರ ಮನೆಗಳಿಗೆ ಚಿಣ್ಣರು ಬೊಂಬೆ ಸಂಭ್ರಮ ಕಣ್ತುಂಬಿಕೊಳ್ಳಲು ಲಗ್ಗೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಈಗ ಬೊಂಬೆಗಳನ್ನು  ಸಾಂಕೇತಿಕವಾಗಿ ಕೂಡಿಸಿ, ದಸರಾ ಆಚರಣೆ ಮಾಡಲಾಗುತ್ತಿರುವುದರಿಂದ ಸಂಭ್ರಮ ಕಡಿಮೆಯಾಗಿದೆ.

ಬೊಂಬೆ ಹಬ್ಬ ಆಚರಣೆ: ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿ  ಕಳಸ ಸ್ಥಾಪನೆ ಮಾಡಿ ಪ್ರತಿನಿತ್ಯ ನೇವೇದ್ಯದೊಂದಿಗೆ ಶ್ರದ್ಧಾ ಭಕ್ತಿಗಳ ಪೂಜೆ ಸಮರ್ಪಣೆಯಾಗುತ್ತದೆ. ಮನೆಗೆ ಬಂದ ಮಾನಿನಿಯರಿಗೆ ಬಾಗಿನ, ಬೊಂಬೆ ಮನೆಗಳಲ್ಲಿ ಬಂಧು ಮಿತ್ರರ ಸಂಭ್ರಮ, ಮೊದಲಾಗಿ ಬೊಂಬೆ ಹಬ್ಬದ ಸಂಭ್ರಮ ಕಾಣ ಬರುತ್ತಿದೆ. ವಿವಿಧ ದೇವಾನುದೇವತೆಗಳ ಬೊಂಬೆಗಳೊಂದಿಗೆ ಕೈಲಾಸ ಶಿವದರ್ಶನ, ತಿರುಪತಿ ಬ್ರಹ್ಮೋತ್ಸವ, ಶ್ರೀ ಕೃಷ್ಣ ಪಾರಿಜಾತ, ದಶಾವತಾರ,ತಿರುಪತಿ, ಗರುಡೋತ್ಸವ, ಮದುವೆ ದಿಬ್ಬಣದ ಬೊಂಬೆಗಳು, ಕುಂಬಕರ್ಣನ ನಿದ್ರಾಭಂಗ, ಪಟ್ಟದಲ್ಲಿ ಕುಳಿತಿದ್ದರೆ, ದಸರಾ ಮೆರವಣಿಗೆ, ಮೈಸೂರು ಅರಮನೆ,ಗ್ರಾಮೀಣ ಚಿತ್ರಣ, ಉದ್ಯಾನವನ, ಮೃಗಾಲಯ, ಕಾಡು, ಕೈಲಾಸ ಪರ್ವತ,ಅರಮನೆ,ದೇವಾಲಯ ಮೊದಲಾದ ವಿಶೇಷ ಆಯೋಜನೆಗಳು ಆಕರ್ಷಣೆಯಾಗಿವೆ. ಬೊಂಬೆಗಳಿಗೆ ಕಲಾತ್ಮಕ ಕುಸುರಿ ಕೆಲಸಗಳು ನಡೆಯುತ್ತವೆ. ನಂತರ ಬೊಂಬೆ ಜೋಡಿಸುವ ಕಾರ್ಯದಲ್ಲಿ ಕುಟುಂಬದವರೊಂದಿಗೆ ಸಮಾಲೋಚನೆ.ಯಾವ ಬೊಂಬೆ ಎಲ್ಲಿಡಬೇಕು. ನಂತರ ಎಲ್ಲವೂ ಅಣಿಗೊಳಿಸಿದ ನಂತರ ಪೂಜಾ ಕಾರ್ಯ, ಮಾನಿನಿಯರಿಗೆ ಮಕ್ಕಳಿಗೆ ಬಾಗಿನ ಮೊದಲಾಗಿ ವಿವಿಧ ಸಂಪ್ರದಾಯಗಳು ನಡೆಯುತ್ತವೆ. 

ನಗರದ ಟಿ.ಎಸ್.ಉಮಾದೇವಿ ಮಹದೇವಯ್ಯ, ಪ್ರಭಾವತಿ ದಯಾಶಂಕರ್, ಶ್ರೀನಿವಾಸ ರಾಘವನ್,  ನಟರಾಜ್, ಮಂಜುಳಾ ಮಂಜುನಾಥ್, ರವಿಶಂಕರ್, ಮಂಜಣ್ಣ, ಲಕ್ಷ್ಮೀ ಶ್ರೀನಿವಾಸಯ್ಯ, ಪುಷ್ಪಾ ಶಿವಶಂಕರ್,ಕಣಿತಹಳ್ಳಿ ದೇವರಾಜ್ ಮೊದಲಾದವರ ಮನೆಗಳಲ್ಲಿ ಬೊಂಬೆಗಳನ್ನು ಕೂಡಿಸುವ ಆಚರಣೆ ನಡೆಯುತ್ತಿದೆ.

ಕರೊನಾದಿಂದ ಸರಳ ಆಚರಣೆ: ನಮ್ಮ ಸಂಸ್ಕೃತಿ ಪರಂಪರೆಗಳ ಪ್ರತೀಕವಾದ ಇಂತಹ ಪಾರಂಪರಿಕ ಕಲೆಗಳನ್ನು  ಉಳಿಸಿ ಬೆಳೆಸಬೇಕಿದೆ. ಈ ಬಾರಿ ಸರ್ಕಾರದ ವತಿಯಿಂದ ನಾಡಹಬ್ಬ ದಸರಾ ಸಹ ಸರಳವಾಗಿ ಆಚರಿಸಲಾಗುತ್ತಿದೆ, ಪ್ರತಿ ವರ್ಷ ವಿಜೃಂಭಣೆಯಿಂದ ಬೊಂಬೆ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕರೊನಾ ಪರಿಣಾಮದಿಂದಾಗಿ, ಸರಳವಾಗಿ ಆಚರಿಸಲಾಗುತ್ತಿದೆ. ದಸರಾ ಬೊಂಬೆಗಳನ್ನು ನೋಡಲು ಹೆಚ್ಚು ಜನ ಮಕ್ಕಳೇ ಬರುವುದರಿಂದ, ಕೊವಿಡ್-19 ಸೋಂಕು ಹೆಚ್ಚಾಗಿ ಹರಡುವ ಸಂಭವವಿದೆ. ಈ ಹಿನ್ನಲೆಯಲ್ಲಿ ಸಾಂಕೇತಿಕವಾಗಿ  ಬೊಂಬೆಗಳನ್ನು ಕಡಿಮೆ ಪ್ರಮಾಣದಲ್ಲಿ ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ನವರಾತ್ರಿಯಲ್ಲಿ ಶಕ್ತಿದೇವತೆಗಳ ಆರಾಧನೆಯಿಂದಾಗಿ ಕೊರೊನಾ ಸಂಕಷ್ಟ ದೂರವಾಗಿ ಹಬ್ಬ, ಸಾಂಪ್ರದಾಯಿಕ ಆಚರಣೆಗಳು ಎಂದಿನಂತೆ ನಡೆಯಲಿ ಎಂದು ಪ್ರಾರ್ಥಿಸುತ್ತೇವೆ ಎನ್ನುತ್ತಾರೆ ನಗರದ ವರಲಕ್ಷ್ಮೀದೇವರಾಜ್ ಹಾಗೂ ಲಕ್ಷ್ಮೀ ಶ್ರೀನಿವಾಸಯ್ಯ.

ರಾಜಕೀಯ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿ ವಿಸ್ತರಣೆ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ

ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಏಪ್ರಿಲ್ 18ರಂದು ಹೊರಡಿಸಿರುವ ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ (Grama Panchayat member) ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2ರ ಸಂಜೆ

[ccc_my_favorite_select_button post_id="121469"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ವಾರ್ಷಿಕ ಕ್ರೀಡಾಕೂಟ 2026-27ರ (Annual sports event) ಪ್ರಶಸ್ತಿ ವಿತರಣೆ ಕಾರ್ಯಕ್ರಮ (Awards ceremony) ನಗರದ ವಕೀಲರ ಭವನದಲ್ಲಿ ಆಯೋಜಿಸಲಾಗಿತ್ತು.

[ccc_my_favorite_select_button post_id="121459"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಹೆಲ್ಮೆಟ್ ಕಡ್ಡಾಯ ಜಾರಿ ಮಾಡಿ, ಹಲವು ರೀತಿಯಲ್ಲಿ ಅರಿವು ಮೂಡಿಸಿದರು, ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಬೇಜವಬ್ದಾರಿ ತೋರಿಸುತ್ತಿದ್ದಾರೆ. ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ (Accident) ಇಬ್ಬರು ಬ್ಯಾಂಕ್ ಉದ್ಯೋಗಿ ಯುವಕರು ಕೂಡ ಹೆಲ್ಮೆಟ್

[ccc_my_favorite_select_button post_id="121414"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]