ದೊಡ್ಡಬಳ್ಳಾಪುರ: ಖ್ಯಾತ ಪತ್ರಕರ್ತ ರವಿಬೆಳೆಗೆರೆ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವೆಂದು ಕರವೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಹೇಳಿದರು.
ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ನೆರೆ, ದಿಟ್ಟ, ನಿಷ್ಟುರ ಪತ್ರಕರ್ತ ರವಿಬೆಳೆಗೆರೆ ಹಲವು ಹೊಸತನಗಳಿಗೆ ಮಾದರಿಯಾದವರು. 90ರ ದಶಕದಲ್ಲಿ ಪತ್ರಿಕೋದ್ಯಮವನ್ನು ಆಳಿದಂತಹ ಮೇರು ವ್ಯಕ್ತಿ.ಕೇವಲ ಪತ್ರಿಕೋದ್ಯಮಕ್ಕೆ ಸೀಮಿತವಾಗದೆ ಚಲನಚಿತ್ರ, ಸಾಹಿತ್ಯ, ನಿರೂಪಕ, ಶಿಕ್ಷಣ ಕ್ಷೇತ್ರದಲ್ಲಿಯೇ ಸಹ ತಮ್ಮ ಛಾಪು ಮೂಡಿಸಿದ ವ್ಯಕ್ತಿಯಾಗಿದ್ದರು. ತಮ್ಮ ಶಾಲೆಯಲ್ಲಿ ಮಕ್ಕಳ ದಾಖಲಾತಿಯಾಲ್ಲಿ ಜಾತಿ ಕಾಲಂ ತೆಗೆದು ಜಾತಿ ಪದ್ದತಿ ವಿರುದ್ದ ಹೋರಾಟ ನಡೆಸಿದವರು. ಕಾರ್ಗಿಲ್ಲ ಯುದ್ದ ಭೂಮಿ, ಪುಲ್ವಾಮ ದಾಳಿಯ ವೇಳೆ ಸ್ಥಳಕ್ಕೆ ತೆರಳಿ ವರದಿ ಮಾಡಿದ ದಿಟ್ಟಪತ್ರಕರ್ತ ರವಿಬೆಳೆಗೆರೆ, ಇಡೀ ತಲೆಮಾರಿಗೆ ಓದಿನ ನಂಟು ಬೆಳೆಸಿದ ರವಿಯವರ ಅಗಲಿಗೆ ಭರಿಸಲಾರದ ನಷ್ಟವೆಂದರು.
ಈ ವೇಳೆ ತಾಲೂಕು ಅಧ್ಯಕ್ಷ ಹೆಚ್.ಎಸ್.ವೆಂಕಟೇಶ್, ಗೌರವ ಅಧ್ಯಕ್ಷ ಪು.ಮಹೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್ ವೇಣು, ಮುಖಂಡರಾದ ರಘುನಂದನ್, ಮಾರುತಿಸೂರಿ, ಹೇಮಂತ್, ಶ್ರೀನಿವಾಸ್, ಮುಕ್ಕೇನಹಳ್ಳಿರವಿ ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

