ನವದೆಹಲಿ: ಪತ್ರಕರ್ತ ಆರ್ನಬ್ ಗೋಸ್ವಾಮಿ ಅವರಿಗೆ ಜಾಮೀನು ನೀಡಿರುವ ಸುಪ್ರೀಂಕೋರ್ಟ್ ನಿರ್ಧಾರವನ್ನು ಸುಪ್ರೀಂಕೋರ್ಟ್ ಕಾರ್ಯವೈಖರಿಯನ್ನು ಟ್ವೀಟ್ ಮೂಲಕ ಟೀಕಿಸಿದಲ್ಲದೆ, ಅವಹೇಳನ ಮಾಡಿದ್ದ ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ 8 ಮಂದಿಗೆ ಅವಕಾಶ ನೀಡಿದ್ದಾರೆ.
ಪ್ರಕರಣ ಒಂದರ ಆರೋಪದ ಮೇಲೆ ಬಂಧಿತರಾಗಿದ್ದ ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಆರ್ನಬ್ ಗೋಸ್ವಾಮಿಗೆ ನೀಡಲಾಗಿದ್ದ ಜಾಮೀನು ಕುರಿತು ಸುಪ್ರೀಂಕೋರ್ಟ್‌ವಿರುದ್ದ ಕುನಾಲ್ ಕಮ್ರಾ ಮನಸೋ ಇಚ್ಚೆ ಟ್ವಿಟ್ ಮಾಡಿದ್ದಾರೆ.
ಕಾಮ್ರಾರ ಈ ಅತಿರೇಕದ ವರ್ತನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನ್ಯಾಯಾಲಯ ಆದೇಶವನ್ನು ಟೀಕಿಸುವ ಇಂತಹ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಡ ಕೇಳಿ ಬಂದಿದೆ. ಇದರ ಬೆನ್ನಲ್ಲೆ ಆತನ ವಿರುದ್ದ 8 ಮಂದಿ ವಕೀಲರು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದು ಅಟಾರ್ನಿ ಜನರಲ್ ಅವಕಾಶ ನೀಡಿದ್ದಾರೆ.
ಸುಪ್ರೀಂಕೋರ್ಟ್ ವಿರುದ್ಧ ಆಧಾರವಿಲ್ಲದೆ, ಕೆಟ್ಟ ರೀತಿಯಲ್ಲಿ ಟೀಕೆ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬುದನ್ನು ಜನರಿಗೆ ತಿಳಿಸಬೇಕಿದೆ ಎಂದು ವೇಣುಗೋಪಾಲ್ ವಕೀಲರೊಬ್ಬರಿಗೆ ಬರೆದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ನನಗೆ ನನ್ನ ಟ್ವೀಟ್‌ಗಳನ್ನು ಹಿಂಪಡೆಯುವ ಉದ್ದೇಶವಿಲ್ಲ. ಅವು ತಮ್ಮಷ್ಟಕ್ಕೆ ಏನು ಹೇಳಬೇಕೋ ಅದನ್ನು ಹೇಳುತ್ತವೆ. ವಕೀಲರು ಇಲ್ಲ, ಕ್ಷಮಾಪಣೆ ಇಲ್ಲ, ದಂಡ ಕಟ್ಟಲ್ಲ, ಜಾಗ ಹಾಳು ಮಾಡಲ್ಲ ಎಂದು ಕಾಮ್ರಾ ಟ್ವೀಟ್ ಮೂಲಕ ಅತಿರೇಕದ ವರ್ತನೆ ಮುಂದುವರೆಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

