ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಖ್ಯಾತ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನಡೆಯಿತು.
ಬ್ರಾಹ್ಮಣ ಸಂಪ್ರದಾಯದಂತೆ ಕಾರ್ಯವನ್ನು ನಡೆಸಿದ್ದು, ಮಗ ಕರ್ಣ ಮತ್ತು ಹಿಮವಂತ್ ರವಿ ಬೆಳಗೆರೆ ಅವರ ಅಂತಿಮ ಕಾರ್ಯವನ್ನು ನೆರವೇರಿಸಿದರು. ಅತ್ಯ ಸಂಸ್ಕಾರದ ಉಸ್ತುವಾರಿಯನ್ನು ಶಿವರಾಂ ಅವರು ವಹಿಸಿಕೊಂಡಿದ್ದರು.
ಗುರುವಾರ ಮಧ್ಯರಾತ್ರಿ ಸುಮಾರು 12.15ರ ವೇಳೆಗೆ ಮೃತರಾದ ರವಿಬೆಳಗೆರೆ ಪ್ರಾರ್ಥಿವ ಶರೀರವನ್ನು ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಗೆ ತರಲಾಗಿತ್ತು. ಮನೆಯಲ್ಲಿ ಕುಟುಂಬ ಅಪ್ತರು, ಸಂಬಂಧಿಗಳು ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 2 ಗಂಟೆಯವರೆಗೂ ರವಿ ಅವರ ಪ್ರಾರ್ಥನಾ ಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆ ಬಳಿಕ ಅಂತಿಮ ವಿಧಿವಿಧಾನದ ಕಾರ್ಯಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

