ರಾಜಸ್ಥಾನ: ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸಿದಾಗ ಮಾತ್ರ ನನ್ನ ಹಬ್ಬ ಪರಿಪೂರ್ಣವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಶನಿವಾರ ರಾಜಸ್ಥಾನದ ಜೈಸಲ್ಮೇರ್‍ಗೆ ದೀಪಾವಳಿ ಹಿನ್ನೆಲೆ ಮೋದಿ ಭೇಟಿ ನೀಡಿದ್ದು, ಗಡಿಯಲ್ಲಿನ ಭಾರತೀಯ ಸೈನಿಕರೊಂದಿಗೆ ದೀಪವಾಳಿ ಆಚರಿಸಿದ್ದಾರೆ.ಈ ಮೂಲಕ ಸತತ ಏಳನೇ ಬಾರಿ ಪ್ರಧಾನಿ ಮೋದಿ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ಸೈನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದೀಪಾವಳಿಯ ಶುಭಾಶಯ ತಿಳಿಸಿ, ದೇಶದ ಪ್ರತಿಯೊಬ್ಬರ ಪರವಾಗಿ ಶುಭ ಕೋರುವುದಾಗಿ ತಿಳಿಸಿದ್ದಾರೆ. ನೀವು ಇರುವವರೆಗೆ ಈ ದೇಶದ ದೀಪಾವಳಿ ಆಚರಣೆ ಸಂಪೂರ್ಣ ಸಂಭ್ರಮದಿಂದ ಕೂಡಿರುತ್ತದೆ. ಹಿಮದಿಂದ ಆವರಿಸಿದ ಪರ್ವತಗಳಲ್ಲಿ ಅಥವಾ ಮರುಭೂಮಿಯಲ್ಲಿ ನೀವು ಇರುತ್ತೀರಿ. ನಿಮ್ಮ ಬಳಿ ಬಂದು ಹಬ್ಬ ಆಚರಿಸಿದಾಗಲೇ ನನ್ನ ದೀಪಾವಳಿ ಪರಿಪೂರ್ಣವಾಗುತ್ತದೆ. ನಿಮ್ಮ ಮುಖದಲ್ಲಿನ ಸಂತಸವನ್ನು ಕಂಡಾಗಲೇ ನನ್ನ ಮುಖದಲ್ಲಿ ನಗು ದ್ವಿಗುಣವಾಗುತ್ತದೆ ಎಂದಿದ್ದಾರೆ.
ಈ ವೇಳೆ ರಕ್ಷಣಾ ಪಡೆಯ ಮುಖ್ಯಸ್ಥಬಿಪಿನ್ ರಾವತ್, ಸೇನೆಯ ಮುಖ್ಯಸ್ಥ ಎಂ.ಎಂ.ನಾರವಾನೆ ಹಾಗೂ ಗಡಿ ಭದ್ರತಾ ಪಡೆಯ ಪ್ರಧಾನ ನಿರ್ದೇಶಕ ರಾಕೇಶ್ ಅಸ್ಥನಾ ಇದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

