ದೊಡ್ಡಬಳ್ಳಾಪುರ: ನವೋದಯ ಚಾರಿಟಬಲ್ ಟ್ರಸ್ಟ್, ರಾಷ್ಟ್ರೋತ್ತನಾ ಗೋಶಾಲೆ ಘಾಟಿ ಮತ್ತು ವಾತ್ಸಲ್ಯಧಾಮ ಚಾರಿಟಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಸಗಣಿಯಿಂದ ತಯಾರಿಸಿದ 500 ದೀಪಗಳನ್ನು ತಯಾರು ಮಾಡಿ ನಗರದ ವಿವಿಧ ಪ್ರದೇಶದಲ್ಲಿ ವಿತರಿಸಲಾಯಿತು
ಈ ವೇಳೆ ನವೋದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನವೋದಯ ಚೇತನ್ ಮಾತನಾಡಿ, ಕರೊನಾ ಮಹಾಮಾರಿ ರೋಗವು ಮಾನವನ ಶ್ವಾಸಕೋಶದ ಮೇಲೆ ಹೆಚ್ಹು ಪರಿಣಾಮ ಬೀರುತಿದ್ದು, ಈ ಬಾರಿ ಹಬ್ಬವನ್ನು ದುಷ್ಪರಿಣಾಮಕಾರಿಯಾದ ಪಟಾಕಿಗಳನ್ನು ಸಿಡಿಸಿ ವಿಷದ ಹೊಗೆಯನ್ನ ಸೇವಿಸಿ ಶ್ವಾಸಕೋಶ ವನ್ನು ಇನ್ನಷ್ಟು ಹೆಚ್ಹು ಹಾನಿ ಮಾಡಿಕೊಳ್ಳದೆ ಬರಿ ದೀಪಗಳನ್ನು ಬೆಳಗಿಸಿ ಪರಿಸರ ಸ್ನೇಹಿಯನ್ನಾಗಿ ಆಚರಿಸುವುದು ಅದರಲ್ಲೂ ಗೊಮಯ ದೀಪವನ್ನು ಪ್ರಜ್ವಲಿಸುವುದು ಸೂಕ್ತ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನವೋದಯ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮ ಸಂಯೋಜಕ ಜನಾರ್ದನ್ , ಗೋ ಸೇವಕರಾದ ಎಂ.ಎಸ್.ಸುನಿಲ್ ಮತ್ತು ವಾತ್ಸಲ್ಯಧಾಮ ಚಾರಿಟಬಲ್ ಟ್ರಸ್ಟ್ನ ಗೌರವಾದ್ಯಕ್ಷೆ ಟಿ.ಈ.ಲೀಲಾವತಿ, ಅರ್ಜುನ್ ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

