ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯಕ್ಕೆ ಬೆಳ್ಳಂಬೆಳಗ್ಗೆ ಪತ್ನಿ ಜೊತೆ ಭೇಟಿ ಕೊಟ್ಟ ಡಿ.ಕೆ ಶಿವಕುಮಾರ್ ಹಾಸನಾಂಬೆ ಧರ್ಶನ ಪಡೆದು,ಪೂಜೆ ಸಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇದೊಂದು ಪುಣ್ಯಕ್ಷೇತ್ರ, ನಂಬಿಕೆ ಪದಕ್ಕೆ ಪವಿತ್ರ ಧರ್ಮಕ್ಷೇತ್ರಗಳೇ ಸಾಕ್ಷಿ. ದೇವಿ ರಾಜ್ಯದ ಜನತೆಯ ಎಲ್ಲ ದುಃಖ ದೂರ ಮಾಡಲಿ. ನಮ್ಮಂಥವರಿಗೆ, ರಾಜ್ಯದ ಮಂದಿಗೆ ಇರುವ ಎಲ್ಲ ನೋವನ್ನು ಪರಿಹಾರ ಮಾಡಲಿ ಎಂದು ದೇವಿಯ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಇಂದು ಹಾಸನಾಂಬೆ ದರ್ಶನ ಕೊನೆಯ ದಿನವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇಗುಲಕ್ಕೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಗಿಲು ಹಾಕಲಾಗುತ್ತದೆ. ನ.5 ರಿಂದ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗಿತ್ತು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

