ಬೆಂಗಳೂರು: ರಮ್ಮಿ,ಪೋಕರ್ ಸೇರಿ ಆನ್‌ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ.ನಾನೂ ಕೂಡ ಹಲವು ಯುವಕರು ಈ ಆನ್‌ಲೈನ್ ಜೂಜಿನಲ್ಲಿ ವ್ಯಸ್ತರಾಗಿರುವುದನ್ನು ಗಮನಿಸಿದ್ದೇನೆ.ಜೂಜು ಯಾವತ್ತಿಗೂ ಅಪಾಯಕಾರಿ ವ್ಯಸನ.ಎಷ್ಟೋ ಕುಟುಂಬಗಳು ಇದರಿಂದ ನಾಶವಾಗಿ ಹೋಗಿರುವ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ.ಹಾಗಾಗಿ ಇಂತಹ ಗೇಮ್‌ಗಳ ಮೇಲೆ ಕಡಿವಾಣ ಬೀಳಬೇಕಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು,ಆನ್‌ಲೈನ್ ಆಟಗಳು ‘game of skill-its not a game of luck’ ಎಂಬ ಆಧಾರದ ಮೇಲೆ ಕಾನೂನಿನ ಮಾನ್ಯತೆ ಪಡೆದುಕೊಂಡಿವೆ. ನಾನು ಈ ವಾದ ಒಪ್ಪುವುದಿಲ್ಲ.ನನ್ನ ಪ್ರಕಾರ ಹಣವನ್ನು ಬಾಜಿ ಕಟ್ಟಿ ಆಡುವ ಯಾವುದೇ ಆಟವಿರಲಿ ಅದು ಜೂಜು ಎಂಬುದು ನನ್ನ ಅಭಿಮತ. ಇಂತಹ ಜೂಜಿಗೆ ವಿಶೇಷವಾಗಿ ಯುವಕರು ಆಕರ್ಷಿತರಾಗಿರುವುದು ದುರಂತ. ಸಾಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಇಂತಹ ಮನೆಹಾಳು ಗೇಮಿಂಗ್‌ಗಳ ಮೇಲೆ ನಿಷೇಧ ಹೇರಲಿ ಎಂದು ಒತ್ತಾಯಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

