ಹೈದರಾಬಾದ್: ಇಡೀ ಜಗತ್ತನ್ನೆ ಕಾಡುತ್ತಿರುವ ಕರೊನಾ ಸೋಂಕಿನ ಕುರಿತು ಪ್ರಖ್ಯಾತ ನಟ, ಶಾಸಕ ಬಾಲಕೃಷ್ಣ ಆತಂಕಕಾರಿ ಹೇಳಿಕೆ ನೀಡಿದ್ದಾರೆ.
ಇಡೀ ವಿಶ್ವ ಕರೊನಾ ಸೋಂಕಿನಿಂದ ತತ್ತರಿಸಿ ಹೋಗಿದೆ.ಲಕ್ಷಾಂತರ ಮಂದಿ ಮಹಾಮಾರಿ ವೈರಸ್‌ಗೆ ಬಲಿಯಾಗಿದ್ದಾರೆ. ಮೊದಲಿಗೆ ಹೋಲಿಕೆ ಮಾಡಿದರೆ, ಈಗ ಸೋಂಕಿತರ ಪ್ರಮಾಣ ಕೊಂಚ ತಗ್ಗಿರಬಹುದು. ಆದರೆ, ಪೂರ್ಣವಾಗಿ ಅಂತೂ ಕರೊನಾ ನಿವಾರಣೆ ಆಗಿಲ್ಲ..!
ಇತ್ತೀಚೆಗೆ ಸೆಹರಿ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಬಾಲಕೃಷ್ಣ, ಈ ಬಗ್ಗೆ ಮಾತನಾಡಿದ್ದಾರೆ. ಸದ್ಯಕ್ಕಂತೂ ಕರೊನಾವನ್ನು ಗುಣಪಡಿಸುವ ಯಾವುದೇ ವ್ಯಾಕ್ಸಿನ್ ಸೃಷ್ಟಿಯಾಗಿಲ್ಲ, ಆಗುವುದು ಇಲ್ಲ! ವೈರಸ್ ನಮ್ಮಿಂದ ದೂರ ಹೋಗಿಲ್ಲ. ನಾವೀಗ ಅದರೊಂದಿಗೆ ಬದುಕುವುದನ್ನು ಕಲಿಯಬೇಕಿದೆ. ಜನರು ಈಗ ತುಂಬ ಎಚ್ಚರಿಕೆಯಿಂದ ಇರಬೇಕಿದೆ’ ಎಂದು ಬಾಲಯ್ಯ ಹೇಳಿದ್ದಾರೆ.
ಕರೊನಾ ಇನ್ನೂ ಇರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿರುವ ಅವರು, ಸಲಹೆಗಳನ್ನು ನೀಡಿದ್ದಾರೆ. ಯಾವುದೇ ಕಾರಣಕ್ಕೂ ತಣ್ಣೀರಿನಲ್ಲಿ ಸ್ನಾನ ಮಾಡಬೇಡಿ. ಎಲ್ಲ ಕಡೆ ಈ ಕರೊನಾ ವೈರಸ್ ಇನ್ನೂ ಇದೆ. ಸಾಧ್ಯವಾದಷ್ಟು ಬಿಸಿನೀರಿನಲ್ಲಿ ಸ್ನಾನ ಮಾಡಿ, ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ ಎಂದು ಬಾಲಕೃಷ್ಣ ಹೇಳಿದ್ದಾರೆ.
ಕರೊನಾ ವೈರಸ್ ಇರುವುದರಿಂದ ನಟ ನಂದಮೂರಿ ಬಾಲಕೃಷ್ಣ, ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ಅವರು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಕರೊನಾ ಬಗ್ಗೆಯೇ ಆತಂಕಕಾರಿ ಹೇಳಿಕೆ ನೀಡಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

