ಬೆಂಗಳೂರು: ಕೇರಳ ಸರ್ಕಾರ ಕರ್ನಾಟಕದಿಂದ ಅಯ್ಯಪ್ಪ ದರ್ಶನಕ್ಕೆ ತೆರಳುವ ಭಕ್ತರಿಗೆ, ಕೋವಿಡ್-19 ಹೆಸರಲ್ಲಿ ಕಿರುಕುಳ ಹಾಗೂ ಪರೀಕ್ಷೆ ಹೆಸರಲ್ಲಿ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿ, ಹಿಂದು ಜಾಗರಣಾ ವೇದಿಕೆ ಮತ್ತು ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ದೊಡ್ಡಬಳ್ಳಾಪುರದ ನೆಲದ ಆಂಜನೇಯ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿತು.
ಈ ವೇಳೆ ಮಾತನಾಡಿದ ಪ್ರತಿಭಟನಾ ನಿರತರು, ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿರುವ ಮಾಲಾಧಾರಿಗಳು ಸರ್ಕಾರದ ಸೂಚನೆಯ ಅನ್ವಯ ಕೋವಿಡ್-19 ಪರೀಕ್ಷೆಗೆ ಒಳಗಾಗಿ ವರದಿಕೊಂಡೋಯ್ದರು, ಕೆರಳ ಸರ್ಕಾರ ಅದನ್ನು ಪಡೆಯದೆ ಮತ್ತೆ ಟೆಸ್ಟ್ ಮಾಡಿಸಿ ನೆಗೆಟಿವ್ ಮುದ್ರೆ ಒತ್ತಿ ಸುಲಿಗೆ ಮಾಡುತ್ತಿದ್ದಾರೆ.
ಪವಿತ್ರ ಕ್ಷೇತ್ರಗಳಾದ ಶಿರಡಿ, ಧರ್ಮಸ್ಥಳ, ಮಂತ್ರಾಲಯ, ಹಾಗೂ ಇನ್ನಿತರೆಡೆ ದಿನಕ್ಕೆ 10 ಸಾವಿರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದರೆ ಕೇರಳದ ಕಮ್ಯುನಿಸ್ಟ್ ಸರ್ಕಾರ 10-15 ಕೋಟಿ ಭಕ್ತರು ತೆರಳುವ ಶಬರಿಮಲೆಗೆ ಕೇವಲ 1 ಸಾವಿರ ಭಕ್ತರಿಗೆ ಅವಕಾಶ ನೀಡಿ ಹಿಂದೂ ವಿರೋಧಿ ನೀತಿ ಮುಂದುವರೆಸಿದೆ.
ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಧೋರಣೆಯನ್ನು ಗಮನಿಸಿ ಅಯ್ಯಪ್ಪ ಮಾಲೆ ಹಾಕುವ ಭಕ್ತರಿಗೆ ನೆಮ್ಮದಿಯಿಂದ ಭಗವಂತನ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಯ್ಯಪ್ಪ ಗುರು ಸ್ವಾಮಿಗಳಾದ ಮಹಾಂತೇಶ್ ಜೀ, ಹಿಂದು ಜಾಗರಣ ವೇದಿಕೆ ಬೆಂ.ಗ್ರಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್, ತಾಲ್ಲೂಕು ಮುಖಂಡರಾದ ಘಾಟಿ ಚಿನ್ನಿ, ಖಾಸ್ ಭಾಗ್ ವಾಸು, ಸುನಾಮಿ ಸಂತು, ವಕೀಲರಾದ ಚಂದ್ರು, ಶಶಿಕುಮಾರ್ ಯಾಧವ್, ಕರೇನಹಳ್ಳಿ ಮಂಜುನಾಥ್, ಸಿಬ್ರಮಣಿ(ಸುಬ್ಬಣ್ಣ), ಗ್ಯಾಸ್ ಅಭಿ ಮತ್ತಿತರಿದ್ದರು.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಅನುಸರಿಸಿ.

