ದೊಡ್ಡಬಳ್ಳಾಪುರ: ನೂತನ ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತರ ಹೋರಾಟದ ಅಂಗವಾಗಿ ನಾಳೆ ದೇಶವ್ಯಾಪಿ ನಡೆಯಲಿರುವ ಭಾರತ್ ಬಂದ್ ಗೆ ತಾಲೂಕಿನ ಖಾಸಗಿ ಶಾಲೆಗಳ ಒಕ್ಕೂಟ ಬೆಂಬಲ ಸೂಚಿಸಿದೆ.
ಭಾರತ್ ಬಂದ್ ಗೆ ಬೆಂಬಲಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಖಾಸಗಿ ಶಾಲೆಗಳ ಒಕ್ಕೂಟದ ಶಾಲೆಗಳಲ್ಲಿ ಡಿ.8ರಂದು ಆನ್‍ಲೈನ್ ತರಗತಿಗಳನ್ನು ರಂದು ಸ್ಥಗಿತಗೊಳಿಸಿ ರೈತರಿಗೆ ನೈತಿಕ ಬೆಂಬಲ ನೀಡಲು ನಿರ್ಧರಿಸಿವೆ. ಈ ಕಾರಣ ನಾಳೆ ಖಾಸಗಿ ಶಾಲೆಗಳ ಮಕ್ಕಳಿಗೆ ಆನ್‍ಲೈನ್ ತರಗತಿ ಇರುವುದಿಲ್ಲ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎ.ಸುಬ್ರಮಣ್ಯ ಹಾಗೂ ಕಾರ್ಯದರ್ಶಿ ಎಸ್. ಆರ್.ರಮೇಶ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ / ಜಾಹಿರಾತಿಗಾಗಿ 7019780535 ಸಂಖ್ಯೆಗೆ ಸಂಪರ್ಕಿಸಿ

