ಬೆಂಗಳೂರು: ಡಿ.6 ಮತ್ತು ಡಿ.20ರಂದು ನಡೆಯ ಬೇಕಿದ್ದ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ತಾತ್ಕಾಲಿಕವಾಗಿ ತಡೆ ನೀಡಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಯ ಆದೇಶಕ್ಕೆ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಚುನಾವಣೆ ಆರಂಭಿಸುವಂತೆ ಸೂಚಿಸಿದೆ.
ಚುನಾವಣೆ ರದ್ದು ಮಾಡುವಂತೆ ಶಿಕ್ಷಕ ಟಿ.ಶಿವಕುಮಾರ್ ಮತ್ತಿತರರು ನೀಡಿದ್ದ ಮನವಿಯಂತೆ ಸಂಘದ ಸದಸ್ಯರ ಪಟ್ಟಿ, ಚುನಾವಣೆ ದಿನಾಂಕ, ಸ್ಥಳ, ತಾಲೂಕು ಮಟ್ಟದ ಚುನಾವಣಾಧಿಕಾರಿಗಳ ನೇಮಕದ ಮಾಹಿತಿ ಇಲ್ಲದೆ ಇರುವುದು ಮತ್ತು ಹೊಸ ತಾಲೂಕು ಸೃಜನೆ-ವಿಂಗಡನೆ ಕುರಿತು ಗೊಂದಲಗಳಿದ್ದು. ಈ ಗೊಂದಲ ಬಗೆಹರಿಸಿ, ನಿಯಮಾನುಸಾರ ಪಾರದರ್ಶಕ ಚುನಾವಣೆ ನಡೆಸಲು ನ.23ರಂದು ಹೊರಡಿಸಿದ್ದ ಚುನಾವಣೆ ಅಧಿಸೂಚನೆಯನ್ನು ಸ್ಥಗಿತಗೊಳಿಸಲು ಅರ್ಜಿ ಸಲ್ಲಿಸಿದ್ದರು.
ಇದನ್ನು ಪರಿಶೀಲಿಸಿದ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಅರ್ಜಿಯಲ್ಲಿನ ಅಂಶಗಳು ಮೇಲ್ನೋಟಕ್ಕೆ ಲೋಪದೋಷಗಳನ್ನು ಸರಿಪಡಿಸುವುದು ಅಗತ್ಯವಾಗಿದೆ ಎಂದು ಕಂಡು ಬಂದಿರುವ ಹಿನ್ನಲೆ ತಡೆಯನ್ನು ನೀಡಿದ್ದರು.
ಅವರು ನೀಡಿದ್ದ ಆದೇಶದಂತೆ ಚುನಾವಣಾಧಿಕಾರಿ ನ.23 ರಂದು ಹೊರಡಿಸಿದ್ದ ವೇಳಾಪಟ್ಟಿಯಂತೆ ಡಿ.6 ರಂದು ನಡೆಯ ಬೇಕಿದ್ದ ತಾಲೂಕು ಕಾರ್ಯಕಾರಿ ಸಮಿತಿ ಚುನಾವಣೆ ಹಾಗೂ ಡಿ.20 ರಂದು ನಿಗದಿಯಾಗಿದ್ದ ರಾಜ್ಯ ಪದಾಧಿಕಾರಿಗಳ ಆಯ್ಕೆ ಚುನಾವಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿದು. ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ಸೂಚಿಸಿದ್ದರು.
ಈ ಆದೇಶವನ್ನು ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿ ಡಿ.15ಕ್ಕೆ ತಾಲೂಕು ಕಾರ್ಯಕಾರಿ ಸಮಿತಿ ಚುನಾವಣೆ, ಡಿ.29ಕ್ಕೆ ರಾಜ್ಯ ಪದಾಧಿಕಾರಿಗಳ ಆಯ್ಕೆ ಚುನಾವಣೆಯನ್ನು ನಡೆಸಲು ಪ್ರಕ್ರಿಯೆ ಆರಂಭಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಚುನಾವಣಾಧಿಕಾರಿ ಸಿ.ಬಿ.ಜಯರಂಗ ಪರಿಷ್ಕೃತ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ / ಜಾಹಿರಾತಿಗಾಗಿ 7019780535 ಸಂಖ್ಯೆಗೆ ಸಂಪರ್ಕಿಸಿ

