ನೆಲಮಂಗಲ: ವಿದ್ಯತ್ ಶಾರ್ಟ್ ಸರ್ಕ್ಯೂಟ್ ನಿಂದ ಗೃಹ ಉಪಕರಣ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ನೆಲಮಂಗಲ ತಾಲೂಕಿನ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನಿಡವಂದ ಗ್ರಾಮದ ಸಿದ್ದಾರ್ಥ ಎಂಟರ್ ಪ್ರೈಸಸ್, ಕುಕ್ಕರ್ ಮತ್ತು ಹೊಂ ಅಪ್ಲೈನ್ಸ್ ತಯಾರಿಕಾ ಘಟಕದಲ್ಲಿ ಘಟನೆ ನಡೆದಿದೆ, ಶಾರ್ಟ್ ಸರ್ಕ್ಯೂಟ್ ನಿಂದ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಕಂಡ ತಕ್ಷಣವೇ ಕಾರ್ಮಿಕರು ಫ್ಯಾಕ್ಟರಿಯಿಂದ ಹೊರಗೆ ಬಂದಿದ್ದಾರೆ, ಫ್ಯಾಕ್ಟರಿಯಲ್ಲಿ 300ಕ್ಕೂ ಹೆಚ್ಚು ಜನರ ಕೆಲಸ ಮಾಡುತ್ತಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಯ ಸಂಭವಿಸಿಲ್ಲ. ಸ್ಥಳಕ್ಕೆ ನೆಲಮಂಗಲ ಅಗ್ನಿಶಾಮಕ ದಳ ಬಂದಿದ್ದು ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸುವಲ್ಲಿ ಹರಸಹಾಸ ಪಡುತ್ತಿದ್ದಾರೆ.
ಕುಕ್ಕರ್ ಸೇರಿದಂತೆ ಗೃಹಪಯೋಗಿ ವಸ್ತುಗಳನ್ನು ಫ್ಯಾಕ್ಟರಿಯಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದ ಇದಕ್ಕಾಗಿ ಥರ್ಮಕೋಲ್, ಕಾಪರ್ ವಸ್ತುಗಳ ದಾಸ್ತಾನು ಮಾಡಲಾಗಿತ್ತು, ಶಾರ್ಟ್ ಸರ್ಕ್ಯೂಟ್ ನಿಂದ ಥರ್ಮಕೋಲ್ ಗೆ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದೆ, ಇದರಿಂದ 4 ಕೋಟಿ ಮೌಲ್ಯದ ಕಾಪರ್ ಬೆಂಕಿಯ ಕೆನ್ನಾಲಿಗೆ ತುತ್ತಾಗಿದೆ, ಫ್ಯಾಕ್ಟರಿಯೊಳಗಿ ಸುರಕ್ಷತಾ ವಿಧಾನಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಿದ್ದು, ಬೆಂಕಿ ನಂದಿಸುವ ಉಪಕರಣ ಅಳವಡಿಸದೆ ಇದ್ದುದು ಬೆಂಕಿ ಅವಘಡಕ್ಕೆ ಕಾರಣವೆಂದು ಪತ್ಯಕ್ಷದರ್ಶಿಗಳ ಆರೋಪವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

