ದೊಡ್ಡಬಳ್ಳಾಪುರ: ಸರ್ಕಾರಿ ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಿಲ್ಲಿಸಲಾಗಿದ್ದ ಸಾರಿಗೆ ಸೇವೆಯನ್ನು ಪೊಲೀಸರ ಭದ್ರತೆಯಲ್ಲಿ ಚಾಲನೆ ನೀಡಲಾಗಿದೆ. (ವಿಡಿಯೋ ನೋಡಿ)
ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಸಹಕಾರದೊಂದಿಗೆ ಪ್ರಸ್ತುತ ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರ, ದಾಬಸ್ ಪೇಟೆಗೆ ಬಸ್ ಸೇವೆ ಆರಂಭಿಸಲಾಗಿದ್ದು, ಹಂತ ಹಂತಗಳಲ್ಲಿ ಸೇವೆ ಹೆಚ್ಚಿಸಲಾಗುವುದು ಎಂದು ಡಿಪೋ ವ್ಯವಸ್ಥಾಪಕ ಆನಂದ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕಳೆದ 3 ದಿನಗಳಿಂದ ನಡೆಸುತ್ತಿದ್ದ ಸಾರಿಗೆ ಸಂಸ್ಥೆ ಸಿಬ್ಬಂದಿಯ ಮುಷ್ಕರ ಇಂದು ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು, ಸಚಿವರೊಂದಿಗೆ ನಡೆದ ಚರ್ಚೆಯ ನಂತರ ಮುಷ್ಕರ ಅಂತ್ಯಗೊಂಡಿದ್ದು, ಬಸ್ ಸೌಕರ್ಯವಿಲ್ಲದೇ ತೊಂದರೆಗೀಡಾಗಿದ್ದ ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟರೆನ್ನುವ ಮುನ್ನವೆ, ಕಳೆದ ರಾತ್ರಿ ನಗರದ ಡಿಪೋದಿಂದ ಬಸ್ ಸೇವೆ ಆರಂಭಿಸಿದ್ದ ಬಸ್ಗಳು ಮತ್ತೆ ಡಿಪೋಗೆ ಮರಳಿ ನಿರಾಸೆ ಮೂಡಿಸಿತ್ತು.
ಸಾರಿಗೆ ಸಚಿವ ಸೇರಿದಂತೆ ಹಿರಿಯ ಸಚಿವರೊಂದಿದೆ ಇಡೀ ದಿನ ಸರ್ಕಾರ ನಡೆಸಿದ ಸರಣಿ ಮಾತುಕತೆ ಯಶಸ್ವಿಯಾಗಿದ್ದು, ತಕ್ಷಣವೇ ಬಸ್ ಸಂಚಾರ ಪುನರಾರಂಭಿಸಲು ಸಾರಿಗೆ ಸಿಬ್ಬಂದಿ ಸಂಘಟನೆ ಮುಖಂಡರು ಸಮ್ಮತಿಸಿದ್ದಾರೆ ಬಸ್ ಸೇವೆ ಆರಂಭಿಸಲಾಗುವುದೆಂದು ತಿಳಿಸಿದ ಬೆನ್ನಲ್ಲೆ ನಗರದ ಡಿಪೋದಿಂದ ಬಸ್ ಸೇವೆ ಆರಂಭಿಸಲಾಗಿತ್ತು, ಆದರೆ ಸಂಘಟನೆಗಳ ಮುಖಂಡರು ಬಂದ್ ಮುಂದುವರೆಸುವುದಾಗಿ ತಿಳಿಸಿದ ಹಿನ್ನೆಲೆ ಸೇವೆ ಆರಂಭಿಸಿದ್ದ ಬಸ್ಗಳು ಡಿಪೋಗೆ ಹಿಂತಿರುಗಿ ಬಂದಿದ್ದವು.
ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ವಿವಿಧ ಸಾರಿಗೆ ನೌಕರರ ಸಂಘಟನೆಗಳು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಸ್ತುತ ಬೆಳವಣಿಗೆಯಲ್ಲಿ ಜನಾಕ್ರೋಶಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಮಣಿದಂತೆ ಕಾಣುತ್ತಿದ್ದು ಪ್ರತಿಭಟನೆ ನಿಲ್ಲಿಸುವುದಾಗಿ ಹೇಳಿಕೆ ನೀಡಿದ್ದಾರೆ ಆದರೂ ಸಿಎಂ ಕಚೇರಿಯಲ್ಲಿ ನಡೆಸಲಾಗುತ್ತಿರುವ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

