ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಇಂದು ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ತರಕಾರಿ ತರಕಾರಿ ಗಾಡಿಗಳನ್ನು ತಳ್ಳಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಭೇಟಿ ನೀಡಿದರು. ಬಳಿಕ ಮಾತನಾಡಿದ ಸಚಿವ ಬಸವರಾಜ್ ಬೊಮ್ಮಾಯಿ, ಶಿಕ್ಷಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ಶಿಕ್ಷಕರಿಗೆ ಕೊಡುವ ಗೌರವ ಅಪಾರ, ಅವರ ಸಮಸ್ಯೆ ಬಹಳಷ್ಟಿದೆ ಎಂದರು.
ನಂತರ ಮಾತನಾಡಿದ ಸಚಿವ ಆರ್. ಅಶೋಕ್, ಸಿಎಂ ಕರೆಮಾಡಿ ಅವರ ಬೇಡಿಕೆ ಆಲಿಸುವಂತೆ ತಿಳಿಸಿದ್ರು. ಬಸವರಾಜ್ ಬೊಮ್ಮಾಯಿ ಅವರನ್ನೂ ಜೊತೆಗೇ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳ ಪರವಾಗಿ ನಾವು ಬಂದಿದ್ದೇವೆ.
ಕೋವಿಡ್ ಲಸಿಕೆಗೆ ಸಂಬಂದಿಸಿದಂತೆ ಬೇಡಿಕೆ ಇದ್ದು, ನೀವು ಕೂಡಾ ಕರೊನಾ ವಾರಿಯರ್ಸ್ಗಳೇ ಅಂತ ತಿಳಿಸಿದ್ದೇವೆ. ಲಸಿಕೆ ಕೊಡೋ ಸಂದರ್ಭದಲ್ಲಿ ನಿಮಗೂ ಮೊದಲ ಹಂತದಲ್ಲಿ ಕೊಡುವಂತೆ ನಾವು ಸಿಎಂಗೆ ತಿಳಿಸುತ್ತೇವೆ. ಶಿಕ್ಷಕ ಸಿಬ್ಬಂದಿ ಪ್ರತ್ಯೇಕ ವಿಮಾ, ಗೌರವಧನ, ಕಿಟ್ ನೀಡುವುದು ಸೇರಿದಂತೆ ಎಲ್ಲವೂ ಸರ್ಕಾರದ ಮೇಲೆ ಹೊರೆ ಬೀಳಲಿದೆ.
ನಾವು ಶಿಕ್ಷಕರ ಜೊತೆ ನಿಲ್ಲುತ್ತೇವೆ, ಗೌರವಿಸುತ್ತೇವೆ. ನಿಮ್ಮ ಪ್ರಾಮಾಣಿಕ ಬೇಡಿಕೆ ಈಡೇರಿಸಲು ಸರ್ಕಾರ ಸ್ಪಂದಿಸಲಿದೆ. ಈಗಾಗಲೇ ಫ್ಯಾಕ್ಟರಿ, ಸಂಚಾರ ಆರಂಭವಾಗಿದೆ. ಎಲ್ಲ ಶುರುವಾಗಿದ್ದು, ನಮ್ಮ ಶಾಲೆ ಆರಂಭವಾಗಿಲ್ಲ ಅನ್ನೋ ಬೇಡಿಕೆ ಇದೆ. ನಿಮ್ಮ ಸಮಸ್ಯೆ ಬಗೆಹರಿಸುವಲ್ಲಿ ನಾವು ಸಿಎಂ ಭೇಟಿ ಮಾಡಿ ವಿಚಾರ ತಿಳಿಸುತ್ತೇವೆ. ಸಿಎಂ ಮೇಲೆ ಒತ್ತಡ ತಂದು ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

