ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಎರಿಕೆಯಿಂದ ಬಸವಳಿಯುತ್ತಿರುವ ಗ್ರಾಹಕನಿಗೆ ಇದೀಗ LPG ಗ್ಯಾಸ್ ದರ ಏರಿಕೆ ಬಿಸಿ ಎದುರಾಗಿದೆ.
ಡಿಸೆಂಬರ್ ತಿಂಗಳಲ್ಲಿ ಎರಡನೇ ಬಾರಿಗೆ ಕೇಂದ್ರ ಸರ್ಕಾರ LPG ಗ್ಯಾಸ್ ದರ ಏರಿಕೆ ಮಾಡುತ್ತಿದ್ದು, 14.2 kg ಸಿಲಿಂಡರ್ ಬೆಲೆ ಇದೀಗ 50 ರೂಪಾಯಿ ಹೆಚ್ಚಾಗಿದೆ. ಪರಿಷ್ಕೃತ ದರ ಡಿಸೆಂಬರ್ 15 ರಿಂದಲೇ ಜಾರಿಯಾಗಲಿದೆ.
ಸಬ್ಸಿಡಿ ರಹಿತ ಗೃಹ ಬಳಕೆ LPG ಸಿಲಿಂಡರ್ ಬೆಲೆ 644 ರೂಪಾಯಿಗಳಿಂದ 694 ರೂಪಾಯಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಡಿಸೆಂಬರ್ ಆರಂಭದಲ್ಲೇ 50 ರೂಪಾಯಿ ಹೆಚ್ಚಿಸೋ ಮೂಲಕ ಗ್ರಾಹಕರಿಗೆ ಬರೆ ಎಳೆದಿತ್ತು. ಇದೀಗ ಮತ್ತೆ 50 ರೂಪಾಯಿ ಏರಿಸೋ ಮೂಲಕ ಡಿಸೆಂಬರ್ ತಿಂಗಳ ಅರ್ಧಕ್ಕೆ ಒಟ್ಟು 100 ರೂಪಾಯಿ ಹೆಚ್ಚಿಸಿದೆ. ಜುಲೈ ಅಂತ್ಯಕ್ಕೆ ಸಿಲಿಂಡರ್ ಬೆಲೆ 594 ರೂಪಾಯಿಗಳಿದ್ದ ಸಿಲಿಂಡರ್ ಬೆಲೆ ಇದೀಗ 694 ರೂಪಾಯಿ ಆಗಿದೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

