ನೆಲಮಂಗಲ: ನಕಲಿ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ ನಂತರ ನಿಗೂಢವಾಗಿ ನಾಪತ್ತೆಯಾಗಿದ್ದ ಹೊಸಕೋಟೆ ಟಿಹೆಚ್ ಓ ಪತ್ತೆಯಾಗುವ ಮೂಲಕ ಪ್ರಕರಣ ಸುಖಾಂತ್ಯವಾಗಿದೆ, ಮನನೊಂದು ಪೋನ್ ಸ್ವೀಚ್ ಆಫ್ ಮಾಡಿ ಪ್ರವಾಸಿ ತಾಣಗಳಿಗೆ ಹೋಗಿದ್ದ ಡಾಕ್ಟರ್ ಅನಂತ ನಡೆದ ಬೆಳವಣಿಗೆಗಳು ಸಾಕಷ್ಟು ಗಂಭೀರತೆ ಪಡೆದಿತ್ತು. ಇಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಶಾಂತಿಗ್ರಾಮ ಟೋಲ್ ಬಳಿ ಡಾಕ್ಟರ್ ಪತ್ತೆಯಾಗಿದ್ದಾರೆ.
ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಡಿ.15 ರಾತ್ರಿಯಿಂದ ನಾಪತ್ತೆಯಾಗಿದ್ದರು, ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಡಾ.ಮಂಜುನಾಥ್ ಹೊಸಕೋಟೆ ನಗರದ ನಕಲಿ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿ ಅವುಗಳ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಲು ಮುಂದ್ದಾಗಿದ್ರು, ಈ ಸಮಯದಲ್ಲಿ ಡಾ.ಮಂಜುನಾಥ್ ರವರಿಗೆ ಬೆದರಿಕೆ ಕರೆಗಳು ಸಹ ಬಂದಿದ್ದವು ಎನ್ನಲಾಗಿದೆ. ಇದರ ನಡುವೆ ನಾಪತ್ತೆಯಾಗಿದ್ದರು.
ಈ ಕುರಿತು ಗೋಪಾಲಕೃಷ್ಣ ಎಂಬುವರು ಡಿ.16 ರಂದು ಟಿಹೆಚ್ ಓ ನಾಪತ್ತೆಯಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದರ ನಡುವೆ ಡಾ.ಮಂಜುನಾಥ್ ರವರನ್ನ ಕಿಡ್ನಾಪ್ ಮಾಡಿರುವ ಬಗ್ಗೆ ವದಂತಿಗಳು ಸಹ ಹರಿದಾಡಿತು,ಪ್ರಕರಣದ ಗಂಭೀರತೆ ಆರಿತ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್ ಡಾ.ಮಂಜುನಾಥ್ ಪತ್ತೆಗಾಗಿ 10 ಸರ್ಕಲ್ ಇನ್ಸ್ಪೆಕ್ಟರ್ ಗಳ ತಂಡ ರಚನೆ ಮಾಡಿದ್ದರು.
ಡಿ.17 ರ ಬೆಳಗ್ಗೆ ತಮ್ಮ ಪತ್ನಿಗೆ ಪೋನ್ ಮಾಡಿದ ಡಾಕ್ಟರ್ ತಾನೂ ಚನ್ನಪಟ್ಟಣದಲ್ಲಿ ಇರುವುದ್ದಾಗಿ ತಿಳಿಸಿದರು, ಇಂದು ಬೆಳಿಗ್ಗೆ ರವಿಚನ್ನಣ್ಣವರ್ ಗೆ ಪೋನ್ ಮಾಡಿ ಡಾಕ್ಟರ್ ತಾನು ಬರುತ್ತಿರುವ ಮಾಹಿತಿ ತಿಳಿಸಿದರು, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಶಾಂತಿಗ್ರಾಮದ ಟೋಲ್ ಬಳಿ ಡಾಕ್ಟರ್ ಮಂಜುನಾಥ್ ಪತ್ತೆಯಾಗಿದ್ದು ಅವರನ್ನು ನೆಲಮಂಗಲ ನಗರ ಠಾಣೆಗೆ ಕರೆತರಲಾಗಿದೆ
ವಿಚಾರಣೆ ಸಮಯದಲ್ಲಿ ಡಾ.ಮಂಜುನಾಥ್ ತನ್ನ ಮನಸ್ಸಿಗೆ ಬೇಸರವಾದ ಕಾರಣದಿಂದ ಪ್ರವಾಸ ಸ್ಥಳಗಳಿಗೆ ಹೋಗಿದ್ದೆ, ರಾಮನಗರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ಕೊಡಗು, ಹೆಚ್ ಡಿ ಕೋಟೆ, ಮಡಿಕೇರಿ ಸ್ಥಳಗಳಿಗೆ ಭೇಟಿ ನೀಡಿದ್ದರು, ನಾಪತ್ತೆಯಾದ ಸುದ್ದಿ ಪ್ರಸಾರವಾದ ಹಿನ್ನೆಲೆ ಪದೇ ಪದೇ ತನ್ನ ಮೊಬೈಲ್ ಗೆ ಕರೆಗಳು ಬರುತ್ತಿದ್ದ ಹಿನ್ನೆಲೆ ಪೋನ್ ಸ್ವೀಚ್ ಆಫ್ ಮಾಡಿದ್ದಾಗಿ ಹೇಳಿದ್ದಾರೆಂದು ರವಿ ಡಿ ಚನ್ನಣ್ಣನವರ್ ತಿಳಿಸಿದ್ದಾರೆ, ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು ಡಾ. ಮಂಜುನಾಥ್ ನಾಪತ್ತೆ ಪ್ರಕರಣದ ವಾಸ್ತವ ಬಯಲುಗೊಳಿಸುವುದಾಗಿ ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

