ದೊಡ್ಡಬಳ್ಳಾಪುರ: ನಗರದ ಟಿಬಿ ವೃತ್ತದ ಬಳಿಯಲ್ಲಿನ ದೊಡ್ಡಬಳ್ಳಾಪುರ ನಗರ ಬೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಕುಂದು – ಕೊರತೆ ಸಭೆ ನಡೆಯಿತು.
ಸಭೆಯಲ್ಲಿ ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಭಾಗವಹಿಸಿದ್ದರು. ಇವರಲ್ಲಿ ಓರ್ವ ಗ್ರಾಹಕ ಮಾತ್ರ ಬಿಲ್ ನಮೂದು ಹೆಚ್ಚಳವಾಗಿದೆ ಎಂದು ಸಮಸ್ಯೆ ತೋಡಿಕೊಂಡರು. ಇವರಿಗೆ ಸ್ಪಷ್ಟನೆ ನೀಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ರೋಹಿತ್ ಬಿಲ್ ಹೆಚ್ಚು ನಮೂದಿಗೆ ಕಾರಣವನ್ನು ವಿವರಿಸಿದರು.
ನಂತರ ಮಾತನಾಡಿದ ಅವರು, ನಗರ ಉಪವಿಭಾಗದ ವ್ಯಾಪ್ತಿಯಲ್ಲಿನ ಗ್ರಾಹಕರ ಕುಂದು – ಕೊರತೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಲು ಪ್ರತಿ ತಿಂಗಳ ಮೂರನೇ ಶನಿವಾರ ಸಭೆ ನಡೆಸಲಾಗುತ್ತಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ಗಮನಕ್ಕೆ ತಂದಾಗ ಮಾಹಿತಿ ಇರದಂತಹ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಶಾಖಾಧಿಕಾರಿಗಳಾದ ರಾಜಪ್ಪ, ಹನುಮಂತೇಗೌಡ, ಮೋಹನ್ ಕುಮಾರ್, ಲಕ್ಷ್ಮಣ್, ಲಿಂಗೇಗೌಡ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

