ದೊಡ್ಡಬಳ್ಳಾಪುರ: ಏಕಕಾಲದಲ್ಲಿ ಗ್ರಾಮಾಂತರ ಠಾಣೆ ಹಾಗೂ ದೊಡ್ಡಬೆಳವಂಗಲ ಠಾಣೆ ಪೊಲೀಸರು ಜೂಜುಕೋರರ ಮೇಲೆ ಮುಗಿಬಿದಿದ್ದು 30ಮಂದಿಯನ್ನು ಬಂಧಿಸಿ, ಬೃಹತ್ ಮೊತ್ತದ ನಗದು, ಕಾರ್, ಬೈಕ್ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಟಿ.ರಂಗಪ್ಪರ ಅನುಮತಿಯ ಮೇರೆಗೆ ಪಿಎಸ್ ಐ ಮಂಜುನಾಥ್ ಹಾಗೂ ಅಪರಾಧ ವಿಭಾಗದ ಪಿಎಸೈ ರಂಗಸ್ವಾಮಯ್ಯ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಂದಿ ಉಪಚಾರ್ ಹೋಟೆಲ್ ಮೇಲೆ ದಾಳಿ ನಡೆಸಿ, ಜೂಜಾಟದಲ್ಲಿ ಭಾಗಿಯಾಗಿದ್ದ ಇಪ್ಪತ್ತು ಮಂದಿ ಜೂಜೂಕೋರರನ್ನು ಬಂಧಿಸಿ 2.26 ಲಕ್ಷ 320 ರೂ ನಗದು, ಮೊಬೈಲ್, ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲೋಡು ಗ್ರಾಮದ ಬಳಿ ಬಯಲಿನಲ್ಲಿ ಜೂಜಾಡುತ್ತಿದ್ದ 10 ಜನರನ್ನು ಬಂಧಿಸಿ 33.570 ರೂ ನಗದು, 2 ಕಾರು, 3 ಬೈಕ್ ಹಾಗೂ ಹತ್ತು ಮೊಬೈಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

