ಎರಡು ಗ್ರಾಮಗಳ ನಡುವಿನ ವಾಜ್ಯ ಲೋಕ ಅದಾಲತ್‍ನಲ್ಲಿ ಸಂದಾನ / 40 ವರ್ಷದ ಪ್ರಕರಣ, 40 ಗಂಟೆಗಳಲ್ಲಿ ಇತ್ಯರ್ಥ…!

ಬಾಗಲಕೋಟೆ: ಎರಡು ಗ್ರಾಮಗಳ ನಡುವೆ ಕಳೆದ 40 ವರ್ಷಗಳಿಂದ ಬಗೆಹರಿಯಲಾಗದ ಪ್ರಕರಣವನ್ನು ಕೇವಲ 5 ದಿನಗಳಲ್ಲಿ 40 ಗಂಟೆಗಳ ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಡಿಸೆಂಬರ 19 ರಂದು ನಡೆದ ಲೋಕ ಅದಾಲತ್‍ನಲ್ಲಿ ಬಾಗಲಕೋಟೆ ತಾಲೂಕಿನ ಕಡ್ಲಿಮಟ್ಟಿ ಮತ್ತು ಮುಡಪಲಜೀವಿ ಗ್ರಾಮಗಳ ನಡುವೆ ಸಿದ್ದೇಶ್ವರ ದೇವಸ್ಥಾನದ ಬಾಬುಗಳಿಗೆ ಸಂಬಂಧಿಸಿದಂತೆ ಸುಮಾರು 1977 ರಿಂದ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೀಗಾಗಿ 40 ವರ್ಷಗಳಿಂದ ಜೀವಂತವಾಗಿದ್ದ ವ್ಯಾಜ್ಯವನ್ನು ಪ್ರಧಾನ ಹಿರಿಯ ನ್ಯಾಯಾಧೀಶ ಪ್ರಕಾಶ ವಿ ಅವರು ಮದ್ಯಸ್ಥಿಕೆ ವಹಿಸಿ ಎರಡು ಗ್ರಾಮದ ಮುಖಂಡರನ್ನು ಸೇರಿಸಿ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದಾರೆ.  

ಸಿದ್ದೇಶ್ವರ ದೇವಸ್ಥಾನದ ಬಾಬುಗಳಿಗೆ ಸಂಬಂಧಿಸಿದಂತೆ ಮುಡಪಲಜೀವಿ, ಚಿಕ್ಕ ಹೊದ್ಲೂರ, ಕಡ್ಲಿಮಟ್ಟಿ, ಶಿರಗುಪ್ಪಿ, ಅಚನೂರು, ಬೆನ್ನೂರು, ಲವಳೇಶ್ವರ, ಜಡ್ರಾಮಕುಂಟಿ ಸೇರಿದಂತೆ ಮುಂತಾದ ಗ್ರಾಮಗಳು ಹೊಂದಾಣಿಕೆ ಇದ್ದವು. ಆದರೆ ದೇವಸ್ಥಾನದ ಕಳಸದ ವಿಚಾರವಾಗಿ ಕಡ್ಲಿಮಟ್ಟಿ ಮತ್ತು ಮುಡಪಲಜೀವಿ ಗ್ರಾಮಗಳ ನಡುವೆ ವ್ಯಾಜ್ಯ ಉಂಟಾಗಿತ್ತು. ನ್ಯಾ.ಪ್ರಕಾಶ ವಿ ಅವರು ಸತತ 5 ಬಾರಿ ಗ್ರಾಮಸ್ಥರನ್ನು ಸಂಧಾನಕ್ಕಾಗಿ ಕರೆಯಿಸಲಾಗಿತ್ತು ಎಂದರು.

ಮುಖ್ಯ ಕಳಸವು 2005 ರಿಂದ ಬಾಗಲಕೋಟೆ ತಹಶೀಲ್ದಾರರ ವಶದಲ್ಲಿತ್ತು. ಕಳಸವು ಎರಡು ಗ್ರಾಮಗದವರ ವಶಕ್ಕೆ ನೀಡದೇ ದೇವಸ್ಥಾನದಲ್ಲಿ ಇಡಬೇಕು. ಜಾತ್ರೆಯ ದಿನ ಎರಡು ಗ್ರಾಮದ ಹಿರಿಯರು ಮತ್ತು ದೇವಸ್ಥಾನದ ಅರ್ಚಕರು ಕಳಸವನ್ನು ಕಡ್ಲಿಮಟ್ಟಿ ಗ್ರಾಮಕ್ಕೆ ತೆಗೆದುಕೊಂಡ ಹೋಗಿ ಗ್ರಾಮಸ್ಥರಿಂದ ಪೂಜೆ ಸಲ್ಲಿಸಿ ನಂತರ ಮುಡಪಲಜೀವಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಕಳಸಾರೋಣದ ಮಾಡಿ ರಥೋತ್ಸವದ ನಂತರ ದೇವಸ್ಥಾನದ ಗರ್ಭಗುಡಿಯಲ್ಲಿಟ್ಟು ಪೂಜೆ ಪುನಸ್ಕಾರದ ಜವಾಬ್ದಾರಿಯನ್ನು ನಿರ್ವಹಿಸಲು ದೇವಸ್ಥಾನದ ಅರ್ಚಕರಿಗೆ ಜವಾಬ್ದಾರಿ ನೀಡುವ ಮೂಲಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಕರಣವನ್ನು ಇತ್ಯರ್ಥಪಡಿಸಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ರಾಜೀ ಸಂಧಾನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಮುಡಪಲಜೀವಿ ಗ್ರಾಮದ ಪರ ವಕೀಲರಾದ ಎಸ್.ಎಸ್.ಹಿರೇಮಠ, ಎಂ.ಎಸ್.ಹಿರೇಮಠ, ಕಡ್ಲಿಮಟ್ಟ ಪರ ವಕೀಲರಾದ ಪಿ.ಎ.ಕುಲಕರ್ಣಿ, ಎಸ್.ಎಸ್.ಹುಬ್ಬಳ್ಳಿ, ಬಾಗಲಕೋಟೆ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಹಾಗೂ ಅವರ ಪರ ವಕೀಲರಾದ ಎಸ್.ಎಲ್.ಕೋರಾ, ಮದ್ಯಸ್ಥಿಕೆದಾರರಾದ ಎನ್.ಪಿ.ಪತ್ತಾರ, ಹಿರಿಯ ವಕೀಲರಾದ ಎ.ಎ.ಜವಳಿ, ಆರ್.ಎಸ್.ನಿಂಗೊಳ್ಳಿ, ಎಸ್.ಎಸ್.ಅನಾಮಿ, ಆರ್.ಬಿ.ಕುಂಟೋಜಿ, ನ್ಯಾಯಾಲಯದ ಬೆಂಚ್ ಸಹಾಯಕ ದಿನೇಶ ರಡ್ಡಿ ಕರಿರಡ್ಡೇರ ಇದ್ದರು.

ರಾಜೀ ಸಂಧಾನ 5632 ಪ್ರಕರಣಗಳು ಇತ್ಯರ್ಥ: ಜಿಲ್ಲೆಯಾದ್ಯಂತ ಡಿಸೆಂಬರ 19 ರಂದು ನಡೆದ ಲೋಕ ಅದಾಲತ್‍ನಲ್ಲಿ ಒಟ್ಟು 9615 ಪ್ರಕರಣಗಳ ಪೈಕಿ 5632 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ 3442 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸಂಧಾನಕ್ಕಾಗಿ ಒಟ್ಟು 9615 ಪ್ರಕರಣಗಳಲ್ಲಿ 1039 ವ್ಯಾಜ್ಯಪೂರ್ವ ಪ್ರಕರಣಗಳು ಮತ್ತು 8576 ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 1039 ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು 4593 ನ್ಯಾಯಾಲದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು ಸೇರಿ ಒಟ್ಟು 5632 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ – ಕಲ್ಪನಾ ಕುಲಕರ್ಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ

ತೀರ್ಪಿನಿಂದ ಎರಡು ಗ್ರಾಮಗಳ ಗ್ರಾಮಸ್ಥರಿಗೆ ಸಂತೋಷವಾಗಿದೆ: ಮುಡಪಲಜೀವಿ ಮತ್ತು ಕಡ್ಲಿಮಟ್ಟಿ ಗ್ರಾಮಗಳ ನಡುವೆ ಮುಖ್ಯ ಕಳಸದ ವಿಚಾರವಾಗಿ ವ್ಯಾಜ್ಯ ಪ್ರಾರಂಭವಾದಾಗ ನನಗೆ 30 ವರ್ಷ. 40 ವರ್ಷದಿಂದ ನ್ಯಾಯಾಲಯದಲ್ಲಿ ವ್ಯಾಜ್ಯವನ್ನು ನಡೆಸಿಕೊಂಡು ಬಂದರೂ ಸಹಿತ ಒಮ್ಮತವಾದ ನ್ಯಾಯ ಸಿಕ್ಕಿರಲಿಲ್ಲ. ಲೋಕ ಅದಾಲತ್ ಶಿಬಿರದಲ್ಲಿ ನಮ್ಮೂರಿನ ಕಳಸದ ವ್ಯಾಜ್ಯವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಗ್ರಾಮಗಳು ಒಂದಾಗಿ ಜಾತ್ರೆ ನೆರವೇರಿಸಲು ಅನುಕೂಲಮಾಡಿಕೊಟ್ಟಿದ್ದಾರೆ. ತೀರ್ಪಿನಿಂದ ಎರಡು ಗ್ರಾಮಗಳ ಗ್ರಾಮಸ್ಥರಿಗೆ ಸಂತೋಷವಾಗಿದೆ – ವಸಂತರಾವ್ ಕೃಷ್ಣಮೂರ್ತಿ ಸರಾಫ್, ಮುಡಪಲಜೀವಿ ಗ್ರಾಮದ ಹಿರಿಯರು

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

ರಾಜಕೀಯ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಆರ್‌. ಅಶೋಕ (R. Ashoka)

[ccc_my_favorite_select_button post_id="121608"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]