ಕೈಲಾಸ: ಭಾರತ ನನ್ನ ಕರ್ಮ ಭೂಮಿಯಾಗಿದ್ದು, ನನ್ನೆಲ್ಲಾ ಆಸ್ತಿ, ನನ್ನ ದೇಹ ಭಾರತಕ್ಕೆ ಸೇರಲಿದೆ ಎಂದು ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತಿಳಿಸಿದ್ದಾನೆ. ಭಾರತದಿಂದ ತಲೆಮರೆಸಿಕೊಂಡು ಈಕ್ವೆಡಾರ್‌ನಲ್ಲಿ ಆಶ್ರಯ ಪಡೆದಿರುವ ನಿತ್ಯಾನಂದ, ಇದೀಗ ತನ್ನ ದೇಶ ಕೈಲಾಸ ಎಂದು ನಾಮಕರಣ ಮಾಡಿಕೊಂಡಿರುವ ಆತ, ವಿಡಿಯೋ ಮೂಲಕ ಮಾತನಾಡಿದ್ದಾನೆ. ವಿಡಿಯೋ ನೋಡಿ
ಭಾರತದ ಬಗ್ಗೆ ನನಗೆ ಕಿಂಚಿತ್ ಬೇಸರವಿಲ್ಲ, ಅದು ನನ್ನ ಕರ್ಮ ಭೂಮಿ. ಆದರೆ ಭಾರತದಲ್ಲಿ ದೇಶ ವಿರೋಧಿ, ಹಿಂದು ಧರ್ಮ ವಿರೋಧಿಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಹಿಂದು ಧರ್ಮದ ಶ್ರೀಗಳ ಮೇಲೆ ನಿರಂತರ ಹಲ್ಲೆ, ಕಾನೂನಿನ ಕುಣಿಕೆಗೆ ಒಳಪಡಿಸಲಾಗುತ್ತಿದೆ.
ನನ್ನೆಲ್ಲ ಸಾಧನೆಯ ಕೃಪೆ ತಾಯಿ ಭಾರತಾಂಭೆಯದ್ದು, ಆಕೆಯ ಮಗನಾಗಿ ಹೆಮ್ಮೆಯಿದೆ. ನನ್ನ ಜೀವ ತ್ಯಾಗದ ನಂತರ ನನ್ನೆಲ್ಲ ಆಸ್ತಿ ಭಾರತಕ್ಕೆ ಸೇರುವಂತೆ ವಿಲ್ ಬರೆದಿದ್ದೇನೆ. ಅಲ್ಲದೆ ನನ್ನ ಜೀವಂತ ಸಮಾಧಿ ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ನಡೆಯಲಿದೆ ಎಂದಿದ್ದಾನೆ.
ಇದಕ್ಕು ಮುನ್ನ ತನ್ನ ದೇಶಕ್ಕೆ ಬರುವಂತೆ ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾನೆ.
ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತರು ವೀಸಾ ಅರ್ಜಿಗಳನ್ನು ಸಲ್ಲಿಸುವಂತೆ ಮನವಿ ಮಾಡಿರುವ ನಿತ್ಯಾನಂದ ಈ ಪ್ರಕ್ರಿಯೆಯ ಹಂತಗಳನ್ನೂ ವಿವರಿಸಿದ್ದಾನೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ, ಕೈಲಾಸಕ್ಕೆ ಬಂದು ತಲುಪುವ ಬಗೆಯನ್ನೂ ಕೂಡ ವಿವರಿಸಿದ್ದಾನೆ.
ಕೈಲಾಸದ ಮಾರ್ಗನಕ್ಷೆ ಬಿಡುಗಡೆ ಮಾಡಿರುವ ನಿತ್ಯಾನಂದ ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾನೆ. ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತಾದಿಗಳು ಆಸ್ಟ್ರೇಲಿಯಾದ ಸಿಡ್ನಿಗೆ ಬಂದು, ಅಲ್ಲಿಂದ ಚಾರ್ಟರ್ಡ್ ವಿಮಾನದಲ್ಲಿ ಕೈಲಾಸಕ್ಕೆ ಬರುವ ಬಗೆಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾನೆ.
ಕೈಲಾಸಕ್ಕೆ ಬರಲು ಗರುಡ ಎಂಬ ವಿಶೇಷ ವಿಮಾನ ಸೇವೆ ಆಸ್ಟ್ರೇಲಿಯಾದಿಂದ ಇರುವುದಾಗಿ ತಿಳಿಸಿದ್ದಾನೆ. ಕೈಲಾಸದಲ್ಲಿ ನೆಲೆಸುವವರಿಗೆ ಉಚಿತ ಊಟ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾನೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

