ಬೆಂಗಳೂರು: ಕೋವಿಡ್-19 ಎರಡನೇ ಅಲೆಯ ಆತಂಕದ ಹಿನ್ನೆಲೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯಬೇಕಿದ್ದ ಬ್ರಹ್ಮರಥೋತ್ಸ ಮತ್ತು ದನಗಳ ಜಾತ್ರೆಯನ್ನು ರದ್ದು ಮಾಡಲಾಗುವುದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹರಿತಲೇಖನಿಗೆ ಸ್ಪಷ್ಟಪಡಿಸಿದ್ದಾರೆ.
2020-21ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ವಾರ್ಷಿಕ ಜಾತ್ರಾ ಉತ್ಸವ ದಿನಾಂಕ ಜ.15 ರಿಂದ ಪ್ರಾರಂಭವಾಗಿ ಜ.19ರ ಪುಷ್ಯ ಶುದ್ಧ ಷಷ್ಠಿಯ ಮಂಗಳವಾರದಂದು ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ನಡೆಯ ಬೇಕಿತ್ತು. ಇದಕ್ಕು ಮುನ್ನ ದನಗಳ ಜಾತ್ರೆ ನಡೆಯುತ್ತಿತ್ತು.
ಕರೊನಾ ಸೋಂಕು ತಡೆಗಟ್ಟಲು ಹೆಚ್ಚು ಜನಸಂಖ್ಯೆ ಸೇರುವ ಸಂತೆ, ಜಾತ್ರೆಗಳಿಗೆ ಸರ್ಕಾರ ರದ್ದು ಮಾಡಿ ಆದೇಶ ನೀಡಿರುವುದರಿಂದ ಮುಂದಿನ ಆದೇಶದವರೆಗೂ ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕಿದೆ. ಅಲ್ಲದೆ ಕರೊನಾ ಎರಡನೇ ಅಲೆಯ ಆತಂಕ ಇರುವುದರಿಂದ ಘಾಟಿ ಜಾತ್ರೆ ನಡೆಸಲು ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ, ನಾಗರಾಧನೆಯ ಶ್ರೀಕ್ಷೇತ್ರವಾಗಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹಾಗೆಯೇ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ಸಮಯದಲ್ಲಿ ದನಗಳ ಜಾತ್ರೆ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ.
ರೈತ ತಾನೂ ಬೆಳೆದ ಫಸಲನ್ನು ಮನೆಗೆ ತುಂಬಿಕೊಳ್ಳುವ ಸಮಯ, ಕೃಷಿ ಚಟುವಟಿಕೆಗಳು ಮುಗಿದು ವಿಶ್ರಾಂತಿ ಪಡೆಯುವ ಸಮಯ ಈ ಸಮಯದಲ್ಲಿ ರೈತ ಮುಂದಿನ ಬೇಸಾಯಕ್ಕೆ ಬೇಕಾದ ದನಗಳನ್ನು ಸಿದ್ದತೆ ಮಾಡುವ ಜವಾಬ್ದಾರಿ ಆತನ ಮೇಲಿರುತ್ತೆ. ದನಗಳಿಲ್ಲದೆ ಕೃಷಿ ಮಾಡುವುದು ಅಸಾಧ್ಯ, ಭೂಮಿ ಉಳುಮೆ ಮಾಡುವುದರಿಂದ ಹಿಡಿದು ಕೃಷಿಗೆ ಬೇಕಾದ ಗೊಬ್ಬರ ಮತ್ತು ಕೃಷಿ ಉತ್ಪನ್ನಗಳನ್ನ ಸಾಕಣಿಕೆ ಮಾಡಲು ಸಹ ರೈತನಿಗೆ ದನಗಳ ಅವಶ್ಯಕ. ಈ ಸಮಯದಲ್ಲಿ ನಡೆಯುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ದನಗಳ ಜಾತ್ರೆ ರೈತರಿಗೆ ಅಚ್ಚುಮೆಚ್ಚು.
ಬಹುತೇಕ ಬಯಲು ಸೀಮೆ ಜಿಲ್ಲೆಯ ರೈತರು ಘಾಟಿ ದನಗಳ ಜಾತ್ರೆಗೆ ಬಂದು ತಮಗೆ ಬೇಕಾದ ದನಗಳ ಜೋಡಿಯನ್ನು ಖರೀದಿಸುತ್ತಿದ್ದರು. ದನಗಳ ಜೋಡಿಯನ್ನು ಮಾರಲು ಸಹ ರೈತರು ಉತ್ಸಾಹದಿಂದ ಸಿಂಗರಿಸಿ ಕರೆತಿದ್ದ ಜಾತ್ರೆ. ದನಗಳನ್ನ ಕೊಳ್ಳುವ ಮತ್ತು ಮಾರುವರ ರೈತರಿಗೆ ವೇದಿಕೆಯಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

