ಬೆಂಗಳೂರು: ಇಂದು ನಡೆಯುತ್ತಿರುವ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್ ಜೊತೆ ಬಂದು ಮತ ಚಲಾಯಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲನಹಳ್ಳಿ ಮತ ಕೇಂದ್ರ ಸಂಖ್ಯೆ-167 ರಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ರಾಜ್ ಅವರು ಮತ ಚಲಾಯಿಸಿದರು.
ಮೊದಲ ಹಂತದ ಚುನಾವಣೆಯ ಮತದಾನದ ಶೇಕಡಾವಾರು ವಿವರ: ಮಧ್ಯಾಹ್ನ 1.00 ಗಂಟೆಯವರೆಗೆ ಶೇ.48.28ರಷ್ಟು ನಡೆದಿದೆ.
*ಹೊಸಕೋಟೆ: 43.05%*
*ನೆಲಮಂಗಲ: 53.51%*
*ಒಟ್ಟು: 48.28%*
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

