ದೊಡ್ಡಬಳ್ಳಾಪುರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಂ.ಶ್ರೀನಿವಾಸಪ್ಪ, ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೆ.ಜೈಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಂ.ರಾಮಚಂದ್ರಯ್ಯ ತಿಳಿಸಿದ್ದಾರೆ.
ಜಿಲ್ಲಾ ಘಟಕದ ಪದಾಧಿಕಾರಿಗಳು: ಎನ್.ಗಿರೀಶ್ ಪ್ರಧಾನ ಕಾರ್ಯದರ್ಶಿ, ಕೆ.ಎಚ್.ಬಸವಲಿಂಗಯ್ಯ ಖಜಾಂಚಿ, ಎಚ್.ಎನ್.ನಾಗೇಶ್,ಶಾಂತಮ್ಮ ಉಪಾಧ್ಯಕ್ಷರು, ಎಂ.ಮುನಿಶಾಮಯ್ಯ, ಮಂಜುಳಾ ಸಹ ಕಾರ್ಯದರ್ಶಿ, ಕೆ.ಆರ್.ವನರಾಜ್,ಅಶ್ವತ್ಥಮ್ಮ ಸಂಘಟನ ಕಾರ್ಯದರ್ಶಿ.
ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಪಾಧಿಕಾರಿಗಳು: ಎಸ್.ವಿ.ವಸಂತಗೌಡ ಪ್ರಧಾನ ಕಾರ್ಯದರ್ಶಿ, ಕೆ.ಆರ್.ನರಸಿಂಹಮೂರ್ತಿ ಖಜಾಂಚಿ, ಎ.ವಿ.ಚಂದ್ರಪ್ಪ,ಆರ್.ರಾಜೇಶ್ವರಿ ಉಪಾಧ್ಯಕ್ಷರು, ವೈ.ಬಿ.ಅಮ್ಮದ್ಖಾನ್, ಕೆ.ಎಸ್.ಚಂದ್ರಕಲಾ ಸಹಕಾರ್ಯದರ್ಶಿ, ಎಚ್.ಎ.ಶ್ರೀನಿವಾಮೂರ್ತಿ, ಟಿ.ಎ.ಜ್ಯೋತಿ ಸಂಘಟನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

