ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಕಂತಿನ ಹಣವನ್ನ ಇಂದು ಬಿಡುಗಡೆ ಮಾಡಿದರು. ಈ ಯೋಜನೆ ಅನ್ವಯ ದೇಶದ ಸುಮಾರು 9 ಕೋಟಿ ರೈತರ ಖಾತೆಗೆ ಒಟ್ಟು 18 ಸಾವಿರ ಕೋಟಿ ರೂಪಾಯಿ ಹಣ ಜಮೆ ಮಾಡಿದರು.
ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಬೆನ್ನಲ್ಲೆ, ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತಕ ಕೃಷಿ ಕಾಯ್ದೆಯ ಪರ ಅಭಿಯಾನ ನಡೆಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಇಂದು ಪ್ರಧಾನಿ ಮೋದಿ ಅವರು ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಹಣ ವರ್ಗಾವಣೆ ಮಾಡಿ. ದೇಶದ ವಿವಿಧ ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಿದರು.
ನಂತರ ಮಾತನಾಡಿದ ಅವರು, ರೈತರ ಹಿತಕಾಪಾಡಲು ಕೇಂದ್ರ ಸರ್ಕಾರ ಬದ್ದವಾಗಿದೆ. ಆದರೆ ಹೋರಾಟ ನಿರತ ರೈತರನ್ನು ಕೆಲವರು ಹಾದಿ ತಪ್ಪಿಸುತ್ತಿದ್ದಾರೆ. ರೈತರಿಗೆ ಕಾಯ್ದೆ ತಿದ್ದುಪಡಿಯಲ್ಲಿನ ಆತಂಕ, ಅನುಮಾನ ದೂರಾಗಿಸಲು ಸರ್ಕಾರ ಚರ್ಚೆಗೆ ಸಿದ್ದವಾಗಿದೆ. ಆದರೆ, ವಿವಿಧ ಆರೋಪದಡಿಯಲ್ಲಿ ಜೈಲಿನಲ್ಲಿರುವವರ ಬಿಡುಗಡೆ ಒತ್ತಾಯಿಸುತ್ತಿರುವುದರಿಂದ ಸಭೆ ವಿಫಲವಾಗುತ್ತಿದೆ. ಈಗಲು ಸಹ ಸರ್ಕಾರ ರೈತರ ಆತಂಕ, ಅನುಮಾನ ದೂರಮಾಡಲು ಸಭೆ ನಡೆಸಲು ಸಿದ್ದವಾಗಿದೆ ಎಂದರು.
ಇದೇ ವೇಳೆ ವಿರೋಧ ಪಕ್ಷ ಹಾಗೂ ಸರ್ಕಾರದ ನೀತಿಯ ವಿರೋಧಿಸುತ್ತಿರುವವರಿಗೆ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ರೈತರು ಕಾಯ್ದೆ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತ ನೀಡಿ ತಾವು ಕೃಷಿ ಕಾಯ್ದೆ ತಿದ್ದು ಪರವಾಗಿದ್ದಾರೆಂದು ಸಾಬೀತು ಮಾಡಿದ್ದಾರೆಂದು ಟಾಂಗ್ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

