ಬೆಂಗಳೂರು: ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗ್ರಾಪಂ ಮತ ಎಣಿಕೆ ಕಾರ್ಯ ಸುಗವಾಗಿ ಮತ್ತು ಶಾಂತಿಯುತ ನಡೆಯುತ್ತಿದ್ದು, ಏಜೆಂಟ್ಗಳು ಯಾವುದೇ ಶಾಂತಯುತ ಮತ ಎಣಿಕೆ ವೀಕ್ಷಿಸುತ್ತಿದ್ದು, ಸವಿವರವಾಗಿ ಮಾಹಿತಿ ನೀಡುತ್ತಿರುವುದರಿಂದ ಫಲಿತಾಂಶ ಪಡೆಯುತ್ತಿದ್ದಾರೆ.
ಪ್ರಸ್ತುತ ಮೂರನೇ ಒಂದರಷ್ಟು ಫಲಿತಾಂಶ ಪ್ರಕಟವಾಗಿದ್ದು, ಮೂರನೇ ಒಂದರಷ್ಟು ಮತ ಎಣಿಕೆ ನಡೆಯುತ್ತಿದ್ದು, ಮೂರನೇ ಒಂದರಷ್ಟು ಬಾಕಿ ಇದೆ ಎಂದು ತಿಳಿಸಿದ್ದಾರೆ.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್, ದೊಡ್ಡಬಳ್ಳಾಪುರ ತಹಶೀಲ್ದಾರ್ ಶಿವರಾಜು, ಡಿವೈ ಎಸ್ಪಿ ಟಿ.ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

