ದೊಡ್ಡಬಳ್ಳಾಪುರ: ರತ್ನಮ್ಮಜಯರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜ.13ರಂದು ಚುನಾವಣೆ ನಡೆಯಲಿದೆ ಎಂದು ಇಒ ಮುರುಡಯ್ಯ ತಿಳಿಸಿದ್ದಾರೆ.
ಜ.13ರ ಬೆಳಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಹಿಂಪಡೆಯಲು ಮಧ್ಯಾಹ್ನ 1ಗಂಟೆವರೆ ಸಮಯ ನಿಗದಿ ಮಾಡಲಾಗಿದೆ ಎಂದು ಅವರು ಹರಿತಲೇಖನಿಗೆ ತಿಳಿಸಿದ್ದಾರೆ. 22 ಮಂದಿ ಸದಸ್ಯ ಬಲದ ತಾಲೂಕು ಪಂಚಾಯಿತಿಯ ಮೇ ತಿಂಗಳ ಕೊನೆಗೆ ಆಡಳಿತಾವಧಿ ಅಂತ್ಯಗೊಳ್ಳಲಿದೆ. ಐದು ವರ್ಷದ ಅವಧಿಯಲ್ಲಿ ಈಗಾಗಲೇ ಶ್ರೀವತ್ಸ, ಡಿ.ಸಿ.ಶಶಿಧರ್, ರತ್ನಮ್ಮಜಯರಾಂ ಅಧ್ಯಕ್ಷರಾಗಿದ್ದಾರೆ.
16 ಮಂದಿ ಕಾಂಗ್ರೆಸ್ ಸದಸ್ಯರಿರುವ ಕಾರಣ ಪೂರ್ವ ನಿರ್ಣಯದಂತೆ ಜ.13ರಂದು ಕೊನಘಟ್ಟ ಕ್ಷೇತ್ರ ನಾರಾಯಣಗೌಡ ಅಧ್ಯಕ್ಷರಾಗಲಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆಯಾದರೂ. ಜೆಡಿಎಸ್ ಪಕ್ಷದ ಮೆಳೆಕೋಟೆ ಕ್ಷೇತ್ರದ ಸದಸ್ಯ ಕಣಿವೇಪುರ ಸುನೀಲ್ ಕುಮಾರ್ ಸಹ ಸ್ಪರ್ಧೆಯಲ್ಲಿದ್ದಾರೆ ಎನ್ನುವ ಗುಸುಗುಸು ಕೇಳಿಬರುತ್ತಿದೆ.
ಪ್ರಸ್ತುತ ಪ್ರಭಾರ ಅಧ್ಯಕ್ಷರಾಗಿ ಯಶೋದಮ್ಮ ಶಿವಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

