ದೊಡ್ಡಬಳ್ಳಾಪುರ: ಜ.12ರಂದು ನಡೆಯಲಿರುವ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ತಾಲ್ಲೂಕು ಮಟ್ಟದ ವಿವಿಧ ಸಾಂಸ್ಕತಿಕ ಸ್ಪರ್ಧೆಗಳು ನಗರದ ಹೊರವಲಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಜಂಬಗಿ, ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿನ ಪೀಳಿಗೆಗೆ ಮಾದರಿಯಾಗಿವೆ. ಈ ದೇಶದ ಶಕ್ತಿ ಎಂದು ಬಿಂಬಿತರಾಗಿರುವ ಯುವಜನತೆ ಸ್ವಾಮಿ ವಿವೇಕಾನಂದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಕುರಿತು ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆ ವೃದ್ದಿಸಿಕೊಳ್ಳಬೇಕಿದೆ ಎಂದರು.
ಕಾಲೇಜಿನ ಹಿರಿಯ ಉಪನ್ಯಾಸಕರಾದ ಬಿ.ಎಸ್.ಪ್ರಸನ್ನ, ಟಿ.ಆರ್.ಶ್ರೀರಾಮ ಗೌಡ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಜರಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು:
ಚಿತ್ರಕಲಾ ಸ್ಪರ್ಧೆ: ಜೆ.ಎಸ್.ಮೇಘನ, ವಿದ್ಯಾನಿ ಪ.ಪೂ.ಕಾಲೇಜು(ಪ್ರಥಮ), ಆರ್.ಮೋಹನ, ಸರ್ಕಾರಿ ಪ.ಪೂ. ಕಾಲೇಜು(ದ್ವಿತೀಯ), ವೈ.ಎಸ್.ಲೋಹಿತ್,ಕೊಂಗಾಡಿಯಪ್ಪ ಪ.ಪೂ. ಕಾಲೇಜು(ತೃತೀಯ)
ಕೊಲೇಜ್ : ಸುಫೀಯ ಖಾತೂನ್,ಸರ್ಕಾರಿ ಪ.ಪೂ. ಕಾಲೇಜು(ಪ್ರಥಮ), ಖುಷಿ ಸಿಂಗಿ ವಿದ್ಯಾನಿಕಾಲೇಜು(ದ್ವಿತೀಯ), ಎನ್.ಮನೋಜ್,ಸರ್ಕಾರಿ ಪ.ಪೂ.ಕಾಲೇಜು(ತೃತೀಯ)
ಆಶು ಭಾಷಣ ಸ್ಪರ್ಧೆ: ಸುಕನ್ಯ(ಪ್ರಥಮ), ಎನ್.ಬಿ.ಶರಣ್ಯ(ದ್ವಿತೀಯ)ದೇವರಾಜ್ ಅರಸ್ ಪ.ಪೂ. ಕಾಲೇಜು, ಶೃತಿ,ಸರ್ಕಾರಿ ಪ.ಪೂ. ಕಾಲೇಜು(ತೃತೀಯ)
ಪ್ರಬಂಧ(ಆಂಗ್ಲ ಮಾಧ್ಯಮ): ಹೆಚ್.ಎಸ್.ಸ್ನೇಹ, ದೇವರಾಜ್ ಅರಸ್ ಪ.ಪೂ. ಕಾಲೇಜು(ಪ್ರಥಮ), ಆರ್.ವೇದಾಜ್ಞ, ವಿದ್ಯಾನಿಕಾಲೇಜು(ದ್ವಿತೀಯ), ಸುಜಲಸುರನ, ವಾಣಿ ಪ.ಪೂ. ಕಾಲೇಜು(ತೃತೀಯ)
ಪ್ರಬಂಧ(ಕನ್ನಡ ಮಾಧ್ಯಮ): ಎನ್.ಜೆ.ಪ್ರತಿಭ,ದೇವರಾಜ್ ಅರಸ್ ಕಾಲೇಜು(ಪ್ರಥಮ), ಎಸ್.ಲೇಖನ, ವಿದ್ಯಾನಿ ಪ.ಪೂ ಕಾಲೇಜು(ದ್ವಿತೀಯ), ಕೆ.ಎಸ್.ಮಧುಶ್ರೀ, ಕೊಂಗಾಡಿಯಪ್ಪ ಪ.ಪೂ. ಕಾಲೇಜು(ತೃತೀಯ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

