ಕಾಡನೂರು ಗ್ರಾಮದಲ್ಲಿ ಕಾಟಿಮರಾಯಸ್ವಾಮಿ ದೇವಾಲಯ ಉದ್ಘಾಟನೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆಯುವ ಕಾಟಿಮರಾಯನ ಆಚರಣೆಗೆ ಸಕಲ ಸಿದ್ದತೆ ನಡೆದಿದೆ. ಸಂಕ್ರಾಂತಿ, ಮಕರಸಂಕ್ರಾಂತಿ ಮುಂತಾದ ಹೆಸರುಗಳಿಂದ ಕರೆಯುವ  ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿ ಕಾಟಿಮರಾಯನ ಹಬ್ಬವೆಂದು ಕರೆಯಲಾಗುತ್ತದೆ. ಕಾಟಿರಾಯನ ಹಬ್ಬದಂದು ರೈತರು ತಮ್ಮ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ,ಕಿಚ್ಚು ಹಾಯಿಸುವ ಅಚರಣೆಗಳಿಂದ ಸಂಕ್ರಾಂತಿ ಹಬ್ಬ ಗ್ರಾಮಗಳಲ್ಲಿ ವಿಶೇಷ ಗಮನ ಸೆಳೆಯುತ್ತದೆ. ಊರಿನ ಹೊರಗಿರುವ ಕಾಟಿಮರಾಯನ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣಿನಿಂದ ಅಲಂಕಾರ ಮಾಡಿ, ಅದಕ್ಕೆ ಬಾಳೆ ಮತ್ತು ಮಾವಿನ ಸೊಪ್ಪು ಕಟ್ಟುವುದು  ಸಾಮಾನ್ಯ ದೃಶ್ಯವಾಗಿತ್ತು. 

 ಕ್ಷುದ್ರ ದೇವತೆಗಳ ಹೆಸರುಗಳಲ್ಲಿ ಒಂದು ಕಾಟಿಮ ಎಂಬುದು. ರೈತ ತಾನು ಸಾಕುವ ರಾಸುಗಳಿಗೆ ಯಾವುದೇ ಕಾಯಿಲೆಗಳು ಈ ಕ್ಷುದ್ರ ದೇವತೆಯಿಂದ ಬಾರದಿರಲೆಂದು ಪೂಜೆ ಸಲ್ಲಿಸುವುದು ಪದ್ದತಿಯಾಗಿದೆ. ಊರ ಹೊರಗಿನ ಭಾಗದಲ್ಲಿ ಮಣ್ಣಿನ ಗೋಪುರವನ್ನು ನಿರ್ಮಾಣ ಮಾಡಿ, ಅದನ್ನು  ಕಾಟಿಮರಾಯನ ಗುಡಿ  ಎಂದು  ಕರೆಯಲಾಗುತ್ತದೆ. ಈ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣು ಪಟ್ಟೆಗಳನ್ನು ಬಳಿಯಲಾಗುತ್ತದೆ. ಹೊಲಗಳಲ್ಲಿ ಸಿಗುವ ತುಂಬೆ ಹೂವು, ಅಣ್ಣೆ ಸೊಪ್ಪಿನ ಹೂವು, ಅವರೆ ಹೂವು, ಹುಚ್ಚೇಳ್ಳು ಹೂವುಗಳನ್ನು ಪೂಜೆಗೆ ಬಳಸಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ಮಂಟಪದ ರೀತಿಯಲ್ಲಿ ಕಾಟಿಮರಾಯನ ಗುಡಿ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿದೆ.  

ಒಂದು ವಾರದಿಂದಲೇ ಕಾಟಿಮರಾಯನ ಹಬ್ಬಕ್ಕಾಗಿ  ಹಳ್ಳಿಗಳಲ್ಲಿ ಸಿದ್ದತೆಯನ್ನು  ಪ್ರಾರಂಭಿಸಲಾಗುತ್ತದೆ. ವಾರದ ಮೊದಲೇ ಹಳ್ಳಿಯ ಯುವಕರು ಹಾಡುಗಳನ್ನು ಹೇಳುತ್ತಾ ಮನೆ ಮನೆಗೆ ತೆರಳಿ  ತುಂಬೆ ಹೂವು ಹಾಕುವ ಪದ್ದತಿ ಇದೆ. ನಂತರ ಪ್ರತಿ ಮನೆಯಿಂದ ಅಕ್ಕಿ, ಕಾಳು, ಬೆಲ್ಲ ಸೇರಿದಂತೆ ರೈತರು ಬೆಳೆಯುವ ಹಲವಾರು ಪದಾರ್ಥಗಳನ್ನು ಸಂಘಟಕರು ಸಂಗ್ರಹಿಸುತ್ತಾರೆ. ಹಬ್ಬದ ದಿನ ಊರ ಹೊರಗಿನ ಸ್ಥಳದಲ್ಲಿರುವ ಕಾಟಿಮರಾಯನ ಗುಡಿಯ ಬಳಿ ಗ್ರಾಮಸ್ಥರೆಲ್ಲಾ ಸೇರಿ ಪ್ರತಿ ಮನೆಯಿಂದ ಸಂಗ್ರಹಿಸಿರುವ ಅಕ್ಕಿ,ಕಾಳು,ಬೆಲ್ಲ ಇತ್ಯಾದಿ ಪದಾರ್ಥಗಳನ್ನು ಬೇಯಿಸಿ ಪ್ರಸಾದವನ್ನು ಸಿದ್ದಮಾಡಲಾಗುತ್ತದೆ. ರಾಸುಗಳು ಕಿಚ್ಚು ಹಾಯ್ದು ಮನೆಗಳಿಗೆ ಹೋದ ನಂತರ ಊರಿನ ಯುವಕರು ಪಂಜುಗಳನ್ನು ಕಟ್ಟಿಕೊಂಡು ಊರಿನ ಗಡಿಭಾಗಕ್ಕೆ ಹೋಗಿ ಅಲ್ಲಿ ಕಿಚ್ಚು ಹಾಕಿ ಬರುವುದು ಈ ಕಾಟಿಮರಾಯನ ಹಬ್ಬದ ವಿಶೇಷಗಳಲ್ಲಿ ಒಂದು. 

ಇಂದು ಕಾಟಿಮರಾಯಸ್ವಾಮಿ  ದೇವಾಲಯ ಉದ್ಘಾಟನೆ: ತಾಲ್ಲೂಕಿನ ಕಾಡನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಟಿಮರಾಯಸ್ವಾಮಿ ದೇವಾಲಯದ ಉದ್ಘಾಟನೆ ಜ.14 ನಡೆಯಲಿದೆ.ಕಾಟಿಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು,ದಾಸೋಹ, ಚನ್ನಕೇಶವಸ್ವಾಮಿ ಭಜನಾ ಮಂಡಲಿ ಕಲಾವಿದರಿಂದ ಭಜನೆ,ರಾಸುಗಳ ಉತ್ಸವ ಮತ್ತು ಮೆರವಣಿಗೆ,ಕಿಚ್ಚು ಹಾಯಿಸುವ ಕಾರ್ಯಕ್ರಮಗಳು ನಡೆಯಲಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

ರಾಜಕೀಯ

ದೊಡ್ಡಬಳ್ಳಾಪುರ: ಮೇ.08 ರಂದು ಜೆಡಿಎಸ್ ಸಮಾವೇಶ.. 20 ಸಾವಿರ ಮಂದಿ ಸೇರುವ ನಿರೀಕ್ಷೆ

ದೊಡ್ಡಬಳ್ಳಾಪುರ: ಮೇ.08 ರಂದು ಜೆಡಿಎಸ್ ಸಮಾವೇಶ.. 20 ಸಾವಿರ ಮಂದಿ ಸೇರುವ ನಿರೀಕ್ಷೆ

ಜೆಡಿಎಸ್ (JDS) ಪಕ್ಷದ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕವೇ ಮೇ.8 ರಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಜೆಡಿಎಸ್ (JDS) ರಜತ ಮಹೋತ್ಸವ ಸಮಾರಂಭ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ

[ccc_my_favorite_select_button post_id="121754"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]