
ದೊಡ್ಡಬಳ್ಳಾಪುರ: 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಗೆ ನೊಂದಣಿ ಮಾಡಿಸಲು ರೈತರು ಮುಗಿಬಿದ್ದ ಕಾರಣ ನೂಕು ನುಗ್ಗಲು ಏರ್ಪಟ್ಟಿದೆ.
ನಗರದ ಎಪಿಎಂಸಿ ಆವರಣದಲ್ಲಿನ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಕಚೇರಿಯಲ್ಲಿ ನಡೆಸಲಾಗುತ್ತಿರುವ ನೊಂದಣಿಗೆ. ಸೂಕ್ತ ಪೊಲೀಸ್ ಬಂದೂ ಬಸ್ತ್ ಕೈಗೊಳ್ಳದ ಕಾರಣ ರೈತರು ಮುಗಿಬಿದ್ದಿದ್ದು, ತಳ್ಳಾಟ ನೂಕಾಟ ಏರ್ಪಟ್ಟು ನೊಂದಣಿ ಮಾಡಲು ಅಧಿಕಾರಿಗಳು ಪರದಾಡುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಗೆ ಜಿಲ್ಲಾಡಳಿತದವತಿಯಿಂದ ಆದೇಶ ನೀಡಿದ್ದು, ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರಾಟ ಮಾಡವ ರೈತರು ಕೃಷಿ ಇಲಾಖೆಯವರು ನೀಡುವ ಫ್ರೂಟ್ಸ್ ದತ್ತಾಂಶದ ಗುರುತಿನ ಸಂಖ್ಯೆ ನೀಡಿ ಜನವರಿ 31 ರವರೆಗೆ ಖರೀದಿ ಕೇಂದ್ರದಲ್ಲಿ ನೊಂದಣಿಗೆ ಅವಕಾಶ ನೀಡಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

