
ದೊಡ್ಡಬಳ್ಳಾಪುರ: ಕರೊನಾ ಲಸಿಕೆ ಕುರಿತು ಜನಸಾಮಾನ್ಯರು ಹಾಗೂ ಸಿಬ್ಬಂದಿಗಿದ್ದ ಆತಂಕವನ್ನು ದೂರ ಮಾಡಲು ಮೊದಲ ದಿನ ಮೊದಲ ಲಸಿಕೆಯನ್ನು ವೈದ್ಯರೆ ಪಡೆದರೆ, ಲಸಿಕೆ ಪಡೆಯಲು ಹಿಂದೇಟಾಕಿದ ಅಂಗನವಾಡಿ ಸಿಬ್ಬಂದಿಗೆ ಸಿಡಿಪಿಒ ಧೈರ್ಯ ತುಂಬಿ ಕಳಿಸಿದ ಘಟನೆ ಶನಿವಾರದಂದು ನಡೆದ ಮೊದಲ ದಿನದ ಕೋವಿಡ್-19 ಲಸಿಕೆ ವಿತರಣೆ ವೇಳೆ ಕಂಡು ಬಂದಿದೆ.
ಶನಿವಾರ ದೇಶಾದ್ಯಂತ ಕರೊನಾ ವಾರಿಯರ್ಸ್ಗೆ ಲಸಿಕೆ ವಿತರಣೆ ಆರಂಭವಾಯಿತು. ಅಂತೆಯೇ ದೊಡ್ಡಬಳ್ಳಾಪುರದ ನಗರ ಆಸ್ಪತ್ರೆ ಮತ್ತು ತಾಯಿ ಮಗು ಆಸ್ಪತ್ರೆಯಲ್ಲಿ ಲಸಿಕೆ ವಿತರಣೆಗೆ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಮೊದಲ ಲಸಿಕೆಯನ್ನು ತಾಲೂಕಿನ ಕರೊನಾ ಸೋಂಕಿನ ನಿರ್ವಹಣೆ ಜವಬ್ದಾರಿ ಹೊತ್ತಿದ್ದ ಡಾ.ಚನ್ನಕೇಶವ ಪಡೆದರು. ನಂತರ ಮೂಳೆ ತಜ್ಞ ಡಾ.ಮಂಜುನಾಥ್, ಅರವಳಿಕೆ ತಜ್ಞ ಡಾ.ರಾಜು, ಶುಶ್ರೋಶಕಿಯರ ಮುಖ್ಯಸ್ಥೆ ಕೋಮಲ ಲಸಿಕೆ ಪಡೆದರು.
ಲಸಿಕೆ ಪಡೆಯಲು ಹಿಂದೇಟಾಕಿದ ಅಂಗನವಾಡಿ ಸಿಬ್ಬಂದಿ: ನಗರ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಿಬ್ಬಂದಿಗಳಿಗೆ ಲಸಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ನಿಗದಿತ ಪಟ್ಟಿಯಂತೆ ಆಶಾ ಕಾರ್ಯಕರ್ತೆಯರು ಲಸಿಕೆ ಪಡೆಯಲು ಬಂದರಾದರೂ, ಅಂಗನವಾಡಿ ಸಿಬ್ಬಂದಿ ಬರದ ಕಾರಣ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆತಂಕಕ್ಕೆ ಒಳಗಾದರೂ. ಕೂಡಲೇ ಸಿಡಿಪಿಒ ಎಸ್.ಅನಿತಾಲಕ್ಷ್ಮೀ ಅವರನ್ನು ಸಂಪರ್ಕಿಸಿ ಅವರ ನೆರವು ಪಡೆದು ಅಂಗನವಾಡಿ ಸಿಬ್ಬಂದಿಗಳನ್ನು ಲಸಿಕೆ ಪಡೆಯಲು ಕರೆಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮೊದಲ ದಿನ 85 ಮಂದಿ ಸರ್ಕಾರಿ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, 24 ಗಂಟೆ ಅವಧಿಯಲ್ಲಿ ಎಲ್ಲರೂ ಆರೋಗ್ಯವಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

