
ಬೆಂ.ಗ್ರಾ.ಜಿಲ್ಲೆ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44(2)ರ ಪ್ರಕಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು, ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು ಪ್ರತಿ ತಾಲ್ಲೂಕಿನಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಮೀಸಲಿರಿಸಿ ಅಧಿಸೂಚಿಸಬೇಕಾಗಿರುತ್ತದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ನಿಗದಿಪಡಿಸುವಾಗ ಪ್ರಕರಣ 44ರ ವಿವರಣೆಯಲ್ಲಿರುವಂತೆ, ಸರದಿಯಂತೆ 1993ನೇ ಸಾಲಿನಲ್ಲಿ ಚುನಾವಣೆ ನಡೆದ ನಂತರದ ಮೊದಲ ಮೀಸಲಾತಿಯಿಂದ 2015ರ ಮೀಸಲಾತಿವರೆಗೆ ಪರಿಗಣಿಸಬೇಕಾಗಿರುತ್ತದೆ.
2020ನೇ ಸಾಲಿನಲ್ಲಿ ನಿಗದಿಪಡಿಸಬೇಕಾದ ಮೀಸಲಾತಿಯು 9ನೇ ಸರತಿಯದ್ದಾಗಿರುವುದರಿಂದ, ಯಾವುದೇ ಗೊಂದಲವಿಲ್ಲದೇ, ಪಾರದರ್ಶಕವಾಗಿ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಜಿಲ್ಲಾಧಿಕಾರಿಗಳು ಸದಸ್ಯರ ಸಮ್ಮುಖದಲ್ಲಿ ಕಾರ್ಯನಿರ್ವಹಿಸಲು ಅನುವಾಗಲು Manual ಪ್ರಕ್ರಿಯೆ ಹೊರತುಪಡಿಸಿ DIO NIC, ಕೊಪ್ಪಳ ಜಿಲ್ಲೆ ಅವರು ಅಭಿವೃದ್ಧಿಪಡಿಸಿರುವ GPPVP application ತಂತ್ರಾಂಶ ಅಥವಾ ಎಕ್ಸೆಲ್ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆ ಮೀಸಲಾತಿ ನಿಗದಿಪಡಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

