
ಬೆಂ.ಗ್ರಾ.ಜಿಲ್ಲೆ: ತೀವ್ರ ಕುತೂಹಲ ಕೆರಳಿಸಿರುವ ಗ್ರಾಮಪಂಚಾಯಿತಿ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿ ಇದೇ ತಿಂಗಳ 22ರಂದು ಮಧ್ಯಾಹ್ನ 3 ಗಂಟೆಗೆ ನಗರದ ಸೊಬಗು ಚಿತ್ರಮಂದಿರದಲ್ಲಿ, ಚುನಾಯಿತ ಸದಸ್ಯರ ಸಮ್ಮುಖದಲ್ಲಿಯೇ ಜಿಲ್ಲಾಧಿಕಾರಿ ಸಭೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳಿಂದ ಹರಿತಲೇಖನಿಗೆ ಮಾಹಿತಿ ದೊರೆತಿದೆ.
ರಾಜ್ಯ ಚುನಾವಣೆ ಆಯೋಗದ ಆದೇಶದಂತೆ ಗ್ರಾಪಂ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪಡಿಸಲಾಗುತ್ತಿದ್ದು, ಚುನಾಯಿತ ಸದಸ್ಯರ ಸಂಖ್ಯೆ ಸಮನಾಗಿದ್ದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡುವುದು, ಜ.8 ರಂದು ನೀಡಿರುವ ಆದೇಶದಂತೆ ತಂತ್ರಾಂಶದ ಮೂಲಕ ನಿಗದಿ ಮಾಡಲಾಗುತ್ತಿದೆ.
ಈ ಸಭೆಗೆ ಚುನಾಯಿತ ಸದಸ್ಯರ ಹಾಜರಿಗೆ ಅವಕಾಶ ನೀಡಿದ್ದು, ಸಭೆಗೆ ತೆರಳಲು ತಿಳುವಳಿಕೆ ಪತ್ರ ಕಡ್ಡಾಯಮಾಡಲಾಗಿದೆ ಎನ್ನಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

