
ದೊಡ್ಡಬಳ್ಳಾಪುರ: ಇತ್ತೀಚೆಗೆ ರಾಜ್ಯಪಾಲರಿಂದ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಪುರಸ್ಕೃತರಾದ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಟಿ.ರಂಗಪ್ಪರವರನ್ನು ದೇವಾಂಗ ಮಂಡಳಿಯ ಕಾರ್ಯಕಾರಿ ಸಮಿತಿ ಹಾಗೂ ಕಾರ್ಯ ನಿರ್ವಾಹಕ ಮಂಡಳಿಯವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಿದ ಮಂಡಳಿಯ ಮುಖಂಡರು, ರಾಷ್ಟ್ರಪತಿಗಳ ಪದಕ ಪಡೆದ ಡಿವೈಎಸ್ಪಿ ಹಾಗೂ ಮುಖ್ಯಮಂತ್ರಿಗಳ ಪದಕ ಪಡೆದ ಸರ್ಕಲ್ ಇನ್ಸ್ಪೆಕ್ಟರ್ ನಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಾಲೂಕಿನ ಹೆಮ್ಮೆಯ ವಿಚಾರವಾಗಿದೆ ಎಂದರು.
ಈ ವೇಳೆ ಮಂಡಳಿ ಗೌರವ ಕಾರ್ಯದರ್ಶಿ ಎ.ಎಸ್.ಕೇಶವ, ಸಹ ಕಾರ್ಯದರ್ಶಿ ಯೋಗಾ ನಟರಾಜ್, ನಿರ್ದೇಶಕರಾದ ಕೆ.ಎನ್.ಜನಾರ್ದನ್, ಕೆ.ಎಸ್.ಗೋಪಿ, ಎಸ್.ಎನ್ ಶಿವರಾಂ, ಹೆಚ್.ವಿ.ಅಖಿಲೇಶ್, ಎಸ್.ಎನ್. ನಟರಾಜ್, ವಿ.ಎಸ್.ರಾಘವೇಂದ್ರ, ಟಿ.ಪಿ.ವರಲಕ್ಷ್ಮಿ, ವಿ.ನಿರ್ಮಲ, ಶೀಲಾ ಲಕ್ಷ್ಮೀನಾರಾಯಣ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

