
ದೊಡ್ಡಬಳ್ಳಾಪುರ: ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಮಹಾಯೋಗಿ ವೇಮನ ಅವರ 609ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಮತ್ತು ತಹಶೀಲ್ದಾರ್ ಟಿ.ಎಸ್. ಶಿವರಾಜ್ ಮಾತನಾಡಿ, ವೇಮನರು ಮಹನೀಯರು, ಸ್ವಾರ್ಥ ಮನೋಭಾವ ಬಿಟ್ಟು ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ರಾಜ ಮನೆತನದಲ್ಲಿ ಹುಟ್ಟಿ ಎಲ್ಲವನ್ನು ತ್ಯಜಿಸಿ ಸಮಾಜಕ್ಕೆ ತಮ್ಮ ತತ್ವಗಳನ್ನು ಸಾರಿದ ವೇಮನರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಸಮಾಜದ ಎಲ್ಲರಿಗೂ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶರೆಡ್ಡಿ, ಶಿಕ್ಷಕರಾದ ಮಲ್ಲಿಕಾರ್ಜುನ ರೆಡ್ಡಿ,ಶಿವಾರೆಡ್ಡಿ, ಕಸಪಾ ಅಧ್ಯಕ್ಷೆ ಪ್ರಮೀಳಾ ಮಹದೇವ್, ನ್ಯಾಯವಾದಿ ಮೋಹನ್ ಕುಮಾರ್ ಜಗನ್ನಾಥ್ ರೆಡ್ಡಿ, ತಾಲ್ಲೂಕು ರೆಡ್ಡಿ ಜನಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತ ರೆಡ್ಡಿ, ಮುಖಂಡರಾದ ರಾಮಂಜಿನಪ್ಪ, ಶಿವಾನಂದ ರೆಡ್ಡಿ, ಅಶ್ವಥ್ ರೆಡ್ಡಿ, ಚಂದ್ರಶೇಖರ ರೆಡ್ಡಿ ರವಿಕಿರಣ್ ರೆಡ್ಡಿ ಅನಂದರೆಡ್ಡಿ, ವೆಂಕಟರಾಮರೆಡ್ಡಿ, ರಾಮಚಂದ್ರರೆಡ್ಡಿ, ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

