
ಗೌರಿಬಿದನೂರು: ಮನೆಯ ಮಾಲೀಕರು ಪ್ರವಾಸ ಹೋಗಿರುವುದು ತಿಳಿದ ಕಳ್ಳರು ಬಾಗಿಲ ಬೀಗ ಮುರಿದು ಮನೆ ಹೊಕ್ಕಿ, ಅಲ್ಮೆರಾದ ಬಾಗಿಲು ಮುರಿದು ಚಿನ್ನಾಭರಣ ಮತ್ತು ನಗದು ಹೊತ್ತೋಯ್ದ ಘಟನೆ ತಾಲ್ಲೂಕಿನ ಮುದುಗೆರೆ ಗ್ರಾಮದಲ್ಲಿ ನಡೆದಿದೆ.
ಮುದುಗೆರೆ ಗ್ರಾಮದ ಗೋವಿಂದಪ್ಪ ಕುಟುಂಬ ಸಮೇತ ಮನೆಗೆ ಬೀಗ ಹಾಕಿ ಪ್ರವಾಸ ಹೋಗಿದ್ದರು. ಮನೆಗೆ ಬೀಗ ಹಾಕಿದ್ದನ್ನು ಗಮನಿಸಿದ ಕಳ್ಳರು ಮಂಗಳವಾರ ರಾತ್ರಿ ಮನೆಯ ಬೀಗ ಮುರಿದು ಓಳ ಪ್ರವೇಶಿಸಿ ಕಬ್ಬಿಣದ ಅಲ್ಮೇರಾ ಬಾಗಿಲು ಮುರಿದು ಸುಮಾರು 80 ಗ್ರಾಂ ತೂಕದ ಬಂಗಾರದ ನೆಕ್ಲೆಸ್ ಹಾಗೂ 1 ಉಂಗುರ 50.ಸಾವಿರ ರೂ ನಗದನ್ನು ಕದ್ದು,ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೋಲಿಸರು ಭೇಟಿ ನೀಡಿ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

