
ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮವಾದ ಐದನೇ ದಿನವಾದ ಜ.21 ರಂದು ನೀಡಲಾದ 1000 ಗುರಿಯಲ್ಲಿ ಒಟ್ಟು 285 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ.
ದೇವನಹಳ್ಳಿ ತಾಲ್ಲೂಕಿನ ಒಂದು ಲಸಿಕಾ ಕೇಂದ್ರದಲ್ಲಿ ನೀಡಲಾದ 600 ಗುರಿಯಲ್ಲಿ 97 ಮಂದಿ ಆರೋಗ್ಯ ಕಾರ್ಯಕರ್ತರಿಗೆ, ಹೊಸಕೋಟೆ ತಾಲ್ಲೂಕಿನ ಒಂದು ಲಸಿಕಾ ಕೇಂದ್ರದಲ್ಲಿ ನೀಡಲಾದ 300 ಗುರಿಯಲ್ಲಿ 144 ಮಂದಿ ಹಾಗೂ ನೆಲಮಂಗಲ ತಾಲ್ಲೂಕಿನ ಒಂದು ಲಸಿಕಾ ಕೇಂದ್ರದಲ್ಲಿ ನೀಡಲಾದ 100 ಗುರಿಯಲ್ಲಿ 44 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

