
ದೊಡ್ಡಬಳ್ಳಾಪುರ: ತಾಲೂಕಿನ ಆರೂಢಿ ಗ್ರಾಮದ ಅನುದಾನಿತ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ವಿದ್ಯಾಧಾರೆ ಗೆಳೆಯರ ಬಳಗ ರಚಿಸಿಕೊಂಡು ಸರ್ಕಾರಿ ಶಾಲಾ ಮಕ್ಕಳಿಗೆ ಹಲವು ಬಗೆಯ ನೆರವನ್ನು ನೀಡುವ ಮೂಲಕ ಮಾದರಿ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ವರ್ಷ ವಿದ್ಯಾರ್ಥಿಗಳಿಗೆ ಕ್ರೀಡಾ, ಸಮವಸ್ತ್ರ, ಶೂ, ಬೆಲ್ಟ್, ಗುರುತಿನ ಚೀಟಿ, ಪುಸ್ತಕ ವಿತರಿಸಿದ್ದ ವಿದ್ಯಾಧಾರೆ ಗೆಳೆಯರ ಬಳಗದ ಯುವಕರು. ಇಂದು ಆರೂಢಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಅನುದಾನಿತ ಪ್ರೌಢ ಶಾಲೆ ಹಾಗೂ ಬನವತಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು ಒಂದು ಸಾವಿರ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಮುಖಂಡರಾದ ಹೆಚ್.ನರಸೀಯಪ್ಪವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಎಂ.ಸಿದ್ದರಾಮಪ್ಪ, ಸುದರ್ಶನ ಬಾಬು, ಮಲ್ಲಿಕಾರ್ಜುನ್, ಶಿಕ್ಷಕರಾದ ಕೃಷ್ಣಯ್ಯ, ರಾಜಣ್ಣ, ಅರುಣ್ ಕುಮಾರ್, ಶ್ರೀನಿವಾಸ್, ವಿದ್ಯಾಧಾರೆ ಗೆಳೆಯರ ಬಳಗದ ರೇಣುಗೋಪಾಲ್, ಎ.ಸಿ.ಹರೀಶ್, ಜಿ.ಹೆಚ್.ರವಿಕುಮಾರ್ ಮತ್ತಿತರಿದ್ದರು
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

