
ದೊಡ್ಡಬಳ್ಳಾಪುರ: ತಾಲೂಕಿನ 28 ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಪಡಿಸಲಾಗಿದ್ದು, ಮುಂದಿನ ಒಂದು ವಾರದ ಒಳಗಾಗಿ ಚುನಾವಣೆಯ ದಿನಾಂಕ ಪ್ರಕಟಿಸಲಾಗುವುದೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ನಗರದ ಸೊಬಗು ಚಿತ್ರಮಂದಿರದಲ್ಲಿ ನಡೆದ ಮೀಸಲಾತಿ ನಿಗದಿ ಸಭೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಜಗದೀಶ್ ಎ.ನಾಯಕ್, ತಹಶಿಲ್ದಾರ್ ಟಿ.ಎಸ್.ಶಿವರಾಜ್ ಮತ್ತಿತರಿದ್ದರು.
ಗ್ರಾಮಪಂಚಾಯಿತಿವಾರು ಮೀಸಲಾತಿ ಪಟ್ಟಿ ವಿವರ
1.ಕೊಡಿಗೇಹಳ್ಳಿ ಗ್ರಾಪಂ: ಅಧ್ಯಕ್ಷ ಎಸ್ಸಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
2.ಕೆಸ್ತೂರು ಗ್ರಾಪಂ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
3.ರಾಜಘಟ್ಟ ಗ್ರಾಪಂ: ಅಧ್ಯಕ್ಷ ಎಸ್ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ
4.ಕೊನಘಟ್ಟ ಗ್ರಾಪಂ: ಅಧ್ಯಕ್ಷ ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ ಎಸ್ಸಿ
5.ತೂಬಗೆರೆ ಗ್ರಾಪಂ: ಅಧ್ಯಕ್ಷ ಎಸ್ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ
6.ಹಾಡೋನಹಳ್ಳಿ ಗ್ರಾಪಂ: ಅಧ್ಯಕ್ಷ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
7.ಹೆಗ್ಗಡಿಹಳ್ಳಿ ಗ್ರಾಪಂ: ಅಧ್ಯಕ್ಷ ಬಿಸಿಎಂ ಎ, ಉಪಾಧ್ಯಕ್ಷ ಎಸ್ಸಿ ಮಹಿಳೆ
8.ಹಣಬೆ ಗ್ರಾಪಂ: ಅಧ್ಯಕ್ಷ ಎಸ್ಸಿ ಮಹಿಳೆ, ಉಪಾಧ್ಯಕ್ಷ ಬಿಸಿಎಂ ಬಿ.
9.ತಿಪ್ಪೂರು ಗ್ರಾಪಂ: ಅಧ್ಯಕ್ಷ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
10.ದೊಡ್ಡಬೆಳವಂಗಲ ಗ್ರಾಪಂ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ
11.ಹಾದ್ರೀಪುರ ಗ್ರಾಪಂ: ಅಧ್ಯಕ್ಷ ಎಸ್ಸಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
12.ಸಕ್ಕರೆಗೊಲ್ಲಹಳ್ಳಿ ಗ್ರಾಪಂ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
13.ಹುಲಿಕುಂಟೆ ಗ್ರಾಪಂ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
14.ಭಕ್ತರಹಳ್ಳಿ ಗ್ರಾಪಂ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್ಟಿ ಮಹಿಳೆ
15.ಸಾಸಲು ಗ್ರಾಪಂ: ಅಧ್ಯಕ್ಷ ಬಿಸಿಎಂ ಬಿ, ಉಪಾಧ್ಯಕ್ಷ ಎಸ್ಸಿ.
16.ಆರೂಢಿ ಗ್ರಾಪಂ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
17.ಹೊಸಹಳ್ಳಿ ಗ್ರಾಪಂ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್ಸಿ ಮಹಿಳೆ.
18.ಚನ್ಮದೇವಿ ಅಗ್ರಹಾರ ಗ್ರಾಪಂ: ಅಧ್ಯಕ್ಷ ಬಿಸಿಎಂ ಎ ಮಹಿಳೆ , ಉಪಾಧ್ಯಕ್ಷ ಎಸ್ಸಿ.
19.ಕಾಡನೂರು ಗ್ರಾಪಂ: ಅಧ್ಯಕ್ಷ ಎಸ್ಸಿ, ಬಿಸಿಎಂ ಎ ಮಹಿಳೆ.
20.ಕನಸವಾಡಿ ಗ್ರಾಪಂ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್ಸಿ ಮಹಿಳೆ.
21.ಹೊನ್ನಾವರ ಗ್ರಾಪಂ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಟಿ.
22. ದೊಡ್ಡತುಮಕೂರು ಗ್ರಾಪಂ: ಅಧ್ಯಕ್ಷ , ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ(ಲಾಟರಿ ಮೂಲಕ ಆಯ್ಕೆ).
23.ಮೇಲಿನ ಜೂಗಾನಹಳ್ಳಿ ಗ್ರಾಪಂ: ಅಧ್ಯಕ್ಷ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
24.ಮಜರಾಹೊಸಹಳ್ಳಿ ಗ್ರಾಪಂ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
25.ಅರಳು ಮಲ್ಲಿಗೆ ಗ್ರಾಪಂ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್ಸಿ ಮಹಿಳೆ.
26.ಕಂಟನಕುಂಟೆ ಗ್ರಾಪಂ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಬಿಸಿಎಂ ಎ.
27.ಮೆಳೇಕೋಟೆ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಸಿ.
28.ದರ್ಗಾಜೋಗಹಳ್ಳಿ ಗ್ರಾಪಂ: ಅಧ್ಯಕ್ಷ ಎಸ್ಸಿ, ಉಪಾಧ್ಯಕ್ಷ ಬಿಸಿಎಂಎ ಮಹಿಳೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

