
ದೊಡ್ಡಬಳ್ಳಾಪುರ: ಲಗೇಜಿಗೆ ಟಿಕೇಟ್ ಮಾಡುವ ವಿಚಾರವಾಗಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿದ್ದು, ತೀವ್ರವಾಗಿ ಹಲ್ಲೆಗೊಳಗಾದ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದಾರೆ. (ವಿಡಿಯೋ ನೋಡಿ)
ಶನಿವಾರ ಸಂಜೆ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಗೆ ಪ್ರಯಾಣಿಸಲು ಕುಟುಂಬವೊಂದು ಲಗೇಜಿಗೆ 30ರೂ ಬದಲು 20 ಪಡೆಯುವಂತೆ ನಿರ್ವಾಹಕ ನೊಂದಿಗೆ ಜಗಳವಾಡಿದ್ದಾರೆ.
ಈ ವೇಳೆ ನಿರ್ವಾಹಕ ಮಾರುತಿ ಮೇಲೆ ಪ್ರಯಾಣಿಕ ಕುಟುಂಬ ಸದಸ್ಯರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ, ಹಲ್ಲೆಗೊಳಗಾದ ಆನಂದ್ ನೆರವಿಗೆ ಬಂದ ಚಾಲಕ ಶರಣಪ್ಪರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಸ್ಥಳದಲ್ಲಿದ್ದ ಸಿಬ್ಬಂದಿ ದೂರಿದರೆ. ನಿರ್ವಾಹಕ ಕೂಡ ಹಲ್ಲೆ ಮಾಡಿದರೆಂಬುದು ಪ್ರಯಾಣಿಕ ಕುಟುಂಬದ ಆರೋಪ
ಹಲ್ಲೆಯಿಂದ ಗಾಯಗೊಂಡ ನಿರ್ವಾಹಕ ಮಾರುತಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಶಬೀರ್ ಮತ್ತಿತರರ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

