
ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವುದಾಗಿ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ ಮತ್ತು ಅಖಿಲ ಭಾರತ ಕಿಸಾಸನ್ ಸಂಘರ್ಷ ಕೋ-ಆರ್ಡಿನೇಷನ್ ಕಮಿಟಿ ಮಾಡಿದೆ.
ಪತ್ರಿಕಾಗೋಷ್ಠಿ ನಡೆಸಿ ಈ ನಿರ್ಧಾರವನ್ನ ಕೈಗೊಂಡಿರುವುದಾಗಿ ತಿಳಿಸಿರುವ ಸಂಘಟನೆಯ ಮುಖಂಡ ವಿಎಂ ಸಿಂಗ್, ಬೇರೆಯವರ ನಿರ್ದೇಶನಕ್ಕೆ ತಕ್ಕಂತೆ ನಾವು ಪ್ರತಿಭಟನೆಯನ್ನ ಮುಂದುವರಿಸಲು ಸಾಧ್ಯವಿಲ್ಲ. ನಮಗೆ ನಿರ್ದೇಶನ ನೀಡುತ್ತಿರೋರಿಗೆ ಶುಭ ಹಾರೈಸುತ್ತೇನೆ. ಈ ಕ್ಷಣದಿಂದ ವಿಎಂ ಸಿಂಗ್ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದೆ ಅಂತಾ ಹೇಳಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

