
ದೊಡ್ಡಬಳ್ಳಾಪುರ: ಹೊಸದಾಗಿ ನಿರ್ಮಾಣ ಮಾಡಲಾಗಿರುವ ಹಾಲು ಉತ್ಪಾದಕ ಸಂಘದ ಕಟ್ಟಡ ಉದ್ಘಾಟನೆಗೆ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ಮಾಹಿತಿ ನೀಡದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರು ಮಾಜಿ ಸಚಿವ ಕೃಷ್ಣಾಬೈರೇಗೌಡ ಎದುರಲ್ಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಮೆಣಸಿ ಕಾಲೋನಿಯಲ್ಲಿ ಬುಧವಾರ ನಡೆದಿದೆ. (ವಿಡಿಯೊ ನೋಡಿ)
ಮೆಣಸಿ ಕಾಲೋನಿಯಲ್ಲಿ ಸುಮಾರು 7ಲಕ್ಷ 50 ಸಾವಿರ ಅನುದಾನದಲ್ಲಿ ನಿರ್ಮಿಸಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣಾಬೈರೇಗೌಡ, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್, ತಾಪಂ ಅಧ್ಯಕ್ಷ ನಾರಾಯಣಗೌಡ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.
ಈ ವೇಳೆ ಕಾರ್ಯಕ್ರಮದ ವೇದಿಕೆ ಬಳಿ ಬಂದ ವೃದ್ದೆಯೋರ್ವರು ಡೈರಿಯಲ್ಲಿ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ಮಾಹಿತಿ ನೀಡದೆ ಉದ್ಘಾಟನೆ ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ದ್ವನಿಗೂಡಿಸಿದ ಯುವಕರು ಡೈರಿ ಉದ್ಘಾಟನೆ ಏಕಪಕ್ಷೀಯವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ಗೊಂದಲ ನಿರ್ಮಾಣವಾಗಿದ್ದು, ಕೃಷ್ಣಾಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ಕಾರ್ಯದರ್ಶಿಗೆ ನೋಟಿಸ್: ಡೈರಿ ಕಟ್ಟಡ ಉದ್ಘಾಟನೆಗೆ ಅಧ್ಯಕ್ಷ, ನಿರ್ದೇಶಕರೆ ಎಲ್ಲರಿಗೂ ಆಹ್ವಾನ ಪತ್ರಿಕೆ ನೀಡಿದ್ದಾರೆ. ಆದರೆ ಗೊಂದಲ ಏಕಾಯಿತು ಎಂಬುದು ತಿಳಿಯದಾಗಿದೆ. ಈ ಕುರಿತು ಕಾರ್ಯದರ್ಶಿಗೆ ನೋಟೀಸ್ ನೀಡುವಂತೆ ಡಿಎಂ ಅವರಿಗೆ ಸೂಚನೆ ನೀಡಲಾಗಿದ್ದು, ಮತ್ತೆ ಈ ರೀತಿ ಅಚಾತುರ್ಯ ಆಗದಂತೆ ಜಾಗ್ರತೆವಹಿಸಲು ತಿಳಿಸಲಾಗಿದೆ ಎಂದು ಬಮೂಲ್ ಬಿರ್ದೇಶಕ ಬಿ.ಸಿ.ಆನಂದ್ ತಿಳಿಸಿದರು.
ಗ್ರಾಮಸ್ಥರ ಆರೋಪ: ಡೈರಿ ಉದ್ಘಾಟನೆ ಕುರಿತು ಸಭೆ ನಡೆಸಿಲ್ಲ, ಆಹ್ವಾನ ಪತ್ರಿಕೆ ವಿತರಣೆ ಎಲ್ಲವನ್ನು ಡೈರಿ ಕಾರ್ಯದರ್ಶಿ ರಾಜಣ್ಣ ಕಾಂಗ್ರೆಸ್ ಪಕ್ಷದ ಪರವಾಗಿ ನಿರ್ಣಯ ಕೈಗೊಂಡಿದ್ದಾರೆ. ಈ ಕುರಿತು ಸಭೆ ವೇಳೆ ಪ್ರಶ್ನಿಸಿದಕ್ಕೆ ಕಾರ್ಯಕ್ರಮದ ನಂತರ ಮಾತನಾಡುವ ಭರವಸೆ ನೀಡಿದ್ದ ಮುಖಂಡರು, ಕಾರ್ಯಕ್ರಮ ಮುಗಿದ ನಂತರ ಸೌಜನ್ಯಕ್ಕು ಮಾತಾಡಿಸದೆ ಓದರು ಎಂದು ಗ್ರಾಮಸ್ಥರು ದೂರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

