
ದೊಡ್ಡಬಳ್ಳಾಪುರ: ತಾಲೂಕಿನ ಗಾಳಿಪೂಜೆ ಗ್ರಾಮದ ಬಳಿಯಿರುವ ನೀಲಗಿರಿ ತೋಪಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ತೀವ್ರವಾಗಿ ಪಸರಿಸಿದ ಬೆಂಕಿಯ ಜ್ವಾಲೆಗೆ ಸುಮಾರು 10 ಎಕರೆಯಷ್ಟು ನೀಲಗಿರಿ ತೋಪು ಹಾನಿಯಾಗಿದೆ.
ಗುರುವಾರ ಮಧ್ಯಾಹ್ನ 12ರ ವೇಳೆಗೆ ಬೆಂಕಿ ಕಂಡು ಬಂದಿದ್ದು, ತೀವ್ರಗತಿಯಲ್ಲಿ ಬೆಂಕಿ ಹರಡಿದ ಕಾರಣ ಈ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಉಂಟಾಗಿತ್ತು. ಹೊಗೆಯ ತೀವ್ರತೆಗೆ ತಳಗವಾರ ಮತ್ತು ನೇರಳಘಟ್ಟ ನಡುವಿನ ರಸ್ತೆಯಲ್ಲಿ ಸಾಗಲು ಪ್ರಯಾಣಿಕರು ಅಸಾಧ್ಯವಾದ ಕಾರಣ, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು.
ಪ್ರಾಣದ ಹಂಗು ತೊರೆದು ಬೆಂಕಿ ನಂದಿಸಿದ ಯುವಕರು: ತೀವ್ರವಾಗಿ ಹರಡುತ್ತಿದ್ದ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ವಾಹನ ಬಂದರು, ವಾಹನ ತೋಪಿನ ಒಳಗೆ ತೆರಳು ಅಸಾಧ್ಯವೆಂದು ಮುಂಜಾಗ್ರತೆವಹಿಸಿದ ಈ ದಾರಿಯಲ್ಲಿ ಸಾಗುತ್ತಿದ್ದ ನೇರಘಟ್ಟ ಹಾಗೂ ತಳಗವಾರ ಗ್ರಾಮದ ನವೀನ್, ಬಾಷಾ, ಗೋವಿಂದರಾಜು, ಸುನೀಲ್ ಹಲವು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ತಹಬದಿಗೆ ತಂದರು.
ಬೆಂಕಿಯ ಜ್ವಾಲೆಗೆ ನೀಲಗಿರಿ ತೋಪು ಹಾಗೂ ವನ್ಯ ಪಕ್ಷಿಗಳು ಆಹುತಿಯಾಗಿದ್ದು, ಈ ವ್ಯಾಪ್ತಿಯಲ್ಲಿ ಪದೇ ಪದೇ ಬೆಂಕಿ ಹಚ್ಚುವ ಕಿಡಿಗಿಡಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

