
ನವದೆಹಲಿ: ಜ.26ರ ಗಣರಾಜ್ಯೋತ್ಸವ ದಿನದಂದು ಕೃಷಿ ಮಸೂದೆ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದ ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿಯ ಹಿಂಸಾತ್ಮಕ ರೂಪಕ್ಕೆ ತಿರುಗಿ ಹಲವಾರು ಪೊಲೀಸರು ಗಾಯಗೊಂಡಿದ್ದರು. ಗಾಯಾಳು ಪೊಲೀಸರನ್ನು ಗುರುವಾರ ಭೇಟಿ ಮಾಡಿರುವ ಗೃಹ ಸಚಿವ ಅಮಿತ್ ಶಾ ಅವರು, ಆರೋಗ್ಯ ವಿಚಾರಿಸಿದರು.
ಘಟನೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ತೀರತ್’ನ ರಾಮ್ ಶಾ ಆಸ್ಪತ್ರೆ ಹಾಗೂ ಶುಶ್ರುತ್ ಟ್ರಾಮಾ ಸೆಂಟರ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ, ಗಾಯಾಳು ಪೊಲೀಸರನ್ನು ಭೇಟಿ ಮಾಡಿದ್ದು, ಸಾಂತ್ವನ ಹೇಳಿದ್ದಾರೆ.
ಈ ಕುರಿತು ಆಸ್ಪತ್ರೆ ಭೇಟಿ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ಹಿಂಸಾಚಾರದಲ್ಲಿ ಗಾಯಗೊಂಡ ದೆಹಲಿ ಪೊಲೀಸರನ್ನು ಇಂದು ಭೇಟಿ ಮಾಡಿದೆ. ಅವರ ಧೈರ್ಯ ಹಾಗೂ ವೀರತೆಗೆ ಹೆಮ್ಮೆ ಪಡುತ್ತೇವೆಂದು ತಿಳಿಸಿದ್ದಾರೆ.
ಗಾಯಾಳು ಪೊಲೀಸರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ಅಮಿತ್ ಶಾ ಅವರು ಆಸ್ಪತ್ರೆಯ ವೈದ್ಯರೊಂದಿಗೆ ಮಾತುಕತೆ ನಡೆಸಿ, ಪೊಲೀಸರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.(ಚಿತ್ರ ಕೃಪೆ ANI)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

