
ಚಿಕ್ಕಬಳ್ಳಾಪುರ: ಆಡುಗೆ ಎಣ್ಣೆ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಆಟೋ ಮೇಲೆ ಪಲ್ಟಿಯಾಗಿ ಟ್ರಾಫಿಕ್ ಜಾಮ್ ಆದ ಘಟನೆ ಚಿಕ್ಕಬಳ್ಳಾಪುರ – ಗೌರಿಬಿದನೂರು ಮಾರ್ಗದ ವೀರ ದಿಮ್ಮಮ್ಮನ ಕಣಿವೆಯಲ್ಲಿ ತಿರುವಿನಲ್ಲಿ ನಡೆದಿದೆ.
ಅಪಘಾತದಲ್ಲಿ ಆಟೋ ನುಜ್ಜು ಗುಜ್ಜಾಗಿದ್ದು, ಟ್ಯಾಂಕರ್ ನಲ್ಲಿದ್ದ ಸುಮಾರು ಹನ್ನೆರಡು ಸಾವಿರ ಅಡುಗೆ ಎಣ್ಣೆ ರಸ್ತೆ ಪಾಲಾಗಿದೆ.
ಆಯಿಲ್ ಟ್ಯಾಂಕರ್ ಮತ್ತು ಚಿಕ್ಕಬಳ್ಳಾಪುರ ಕಡೆಯಿಂದ ಗೌರಿಬಿದನೂರು ಕಡೆಗೆ ಸಾಗುತ್ತಿದ್ದಾಗ ಅಪಘಾತ ವೀರದಿಮ್ಮಮ್ಮನ ಕಣಿವೆಯಲ್ಲಿ ತಿರುವೊಂದರ ಬಳಿ ಆಟೋವು ಟ್ಯಾಂಕರ್ ನ್ನು ಹಿಂದಿಕ್ಕಲು ಮುನ್ನುಗ್ಗಿದಾಗ ಟ್ಯಾಂಕರ್ ಸಹಾ ವೇಗವಾಗಿ ತಿರುಗಿಸಿದಾಗ ಆಯ ತಪ್ಪಿ ಆಟೋ ಮೇಲೆ ಉರುಳಿದೆ.
ಆಟೋ ದಲ್ಲಿದ್ದ ಐವರು ಮತ್ತು ಟ್ಯಾಂಕರ್ ನಲ್ಲಿದ್ದ ಇಬ್ಬರು ಆಶ್ಚರ್ಯ ಕರವಾಗಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ದಿಂದ ಚಿಕ್ಕಬಳ್ಳಾಪುರ- ಗೌರಿಬಿದನೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಕಿಲೋಮೀಟರ್ ಉದ್ದ ವಾಹನಗಳು ನಿಂತು ಶಾಲಾ, ಕಾಲೇಜು, ಕಛೇರಿಗಳಿಗೆ ಮತ್ತು ಅನ್ಯ ಕಾರ್ಯ ನಿಮಿತ್ತ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಿದೆ
ಟ್ಯಾಂಕರ್ ನಲ್ಲಿದ್ದ ಅಡುಗೆ ಎಣ್ಣೆ ಹೊಳೆಯಂತೆ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಕಣಿವೆ ಪ್ರದೇಶದಲ್ಲಿ ವಾಹನ ಚಲಾಯಿಸಲು ಸಹಾ ತೊಂದರೆಯಾಗಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೋಲಿಸರು ಭೇಟಿ ನೀಡಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲು ಸಿದ್ದತೆ ನಡೆಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

