
ಪಂಜಾಬ್: ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಒಂದು ಕುಟುಂಬದ ಕನಿಷ್ಠ ಒಬ್ಬ ಸದಸ್ಯರನ್ನಾದರೂ ಕಳುಹಿಸಲು ಬತಿಂಡಾದ ವಿರ್ಕ್ ಖುರ್ದ್ ಗ್ರಾಮ ಪಂಚಾಯತಿ ಒಂದು ವಾರ ನಿರ್ಧರಿಸಿದೆ.
ಒಂದು ವೇಳೆ ಪ್ರತಿಭಟನೆಗೆ ತೆರಳದವರಿಗೆ 1,500 ರೂ. ದಂಡ ಮತ್ತು ದಂಡ ಪಾವತಿಸದವರಿಗೆ ಬಹಿಷ್ಕಾರ ನೀಡಲಾಗುವುದು” ಎಂದು ಸರ್ಪಂಚ್ ಮಂಜಿತ್ ಕೌರ್ ಹೇಳುತ್ತಾರೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಗಣರಾಜ್ಯೋತ್ಸವದ ದಿನದಂದು ನಡೆದ ಅಹಿತಕರ ಘಟನೆಯಿಂದ ಬೇಸರಗೊಂಡು ಹಲವು ರೈತ ಸಂಘಟನೆಗಳು ಪ್ರತಿಭಟನೆ ಹಿಂಪಡೆದಿದ್ದು, ಪ್ರತಿಭಟನೆಯಲ್ಲಿ ರೈತರ ಸಂಖ್ಯೆ ಕಡಿಮೆಯಾಗುವುದನ್ನು ತಡೆಯಲು ಈ ತಂತ್ರ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ( ಪೊಟೋ ಕೃಪೆ ANI )
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

