
ದುಬೈ: ನಟ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಲೋಗೋ ಹಾಗೂ 2,000 ಅಡಿ ಎತ್ತರ ವರ್ಚುವಲ್ ಪೊಸ್ಟರ್ ವಿಶ್ವದ ಎತ್ತರದ ಕಟ್ಟದ ದುಬೈನ ಬುರ್ಜ್ ಖಲೀಫಾ ಮೇಲೆ ಬಿಡುಗಡೆ ಮಾಡಗಿದೆ.
ಬುರ್ಜ್ ಖಲೀಫ ಮೇಲೆ ಬಿಡುಗಡೆಯಾದ ವರ್ಚುವಲ್ ಪೋಸ್ಟರ್ಲ್ಲಿ ಸುದೀಪ್ ಮಿಂಚಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ನಿರ್ದೇಶಕ ಅನೂಪ್ ಭಂಡಾರಿಯವರ ಕಲ್ಪನೆಯಲ್ಲಿ ವಿಕ್ರಾಂತ್ ರೋಣ ಚಿತ್ರ ತಯಾರಾಗುತ್ತಿದೆ.
2 ಸಾವಿರ ಅಡಿ ಕಟ್ಟಡದ ಮೇಲೆ ಮೂರು ನಿಮಿಷಗಳ ಕಾಲ ಕಿಚ್ಚನ ಕಟೌಟ್ ರಾರಾಜಿಸಿದ್ದು, ಸಿನಿ ಪ್ರಿಯರು ಕಣ್ತುಂಬಿಕೊಂಡಿದ್ದಾರೆ. ಇನ್ನು ಈ ಅದ್ಭುತ ಕ್ಷಣವನ್ನು ಆರು ಕ್ಯಾಮೆರಾಗಳಲ್ಲಿ ಕಿಚ್ಚನ ತಂಡ ಸೆರೆಹಿಡಿದಿದೆ. ಬುರ್ಜ್ ಖಲೀಫಾದ ಮೇಲೆ ಚಿಕ್ಕದಾಗಿ ಸುದೀಪ್ರ 25 ವರ್ಷಗಳ ಸಿನಿ ಪಯಣದ ಪರಿಚಯವನ್ನೂ ಬಿತ್ತರಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

